ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಿದ್ದಾಪುರ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ 100℅ ಫಲಿತಾಂಶ
Friday, April 24, 2026
2025-26 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಸಿದ್ದಾಪುರ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ 39 ಮಕ್ಕಳಲ್ಲಿ 39 ಮಕ್ಕಳು ಉತ್ತೀರ್ಣರಾಗುವುದರೊಂದಿಗೆ 100℅ ಫಲಿತಾಂಶ ಬಂದಿರುತ್ತದೆ.
ವಿಶಿಷ್ಠ ಶ್ರೇಣಿಯಲ್ಲಿ 21 , ಪ್ರಥಮ ಶ್ರೇಣಿಯಲ್ಲಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅನು ಸುವರ್ಣ ಮತ್ತು ಪ್ರವೀಣ 625ರಲ್ಲಿ 604 ಅಂಕ ಪಡೆದು ಶಾಲೆಯ ಕೀರ್ತಿ ಯನ್ನು ಹೆಚ್ಚಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಅಧಿಕಾರಿ ವೃಂದದವರು, ಪ್ರಾಂಶುಪಾಲರು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಪೋಷಕರು ಶುಭ ಹಾರೈಸಿದ್ದಾರೆ.