ಏ. 25: ಅಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 275-S ಇದರ ಸಂಪುಟ ಪದಪ್ರಧಾನ ಕಾರ್ಯಕ್ರಮ
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಅಲಯನ್ಸ್, ಡಿಸ್ಟ್ರಿಕ್ಟ್ 275-S ಇದರ ಸಂಪುಟ ಪದಪ್ರಧಾನ ಕಾರ್ಯಕ್ರಮವು ಏಪ್ರಿಲ್ 25ರಂದು ಅಂಬಾಗಿಲುವಿನ ಅಮೃತ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಡಿಸ್ಟ್ರಿಕ್ಟ್ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಭಾರತೀಯ ಮೂಲದ ಸೇವಾ ಸಂಸ್ಥೆ ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ 2008 ರಲ್ಲಿ ಆರಂಭಗೊಂಡಿತು. ಸಮಾಜ ಕಲ್ಯಾಣ, ಸಂಸ್ಕೃತಿ, ವಿಜ್ಞಾನ, ಕ್ರೀಡೆ ಹಾಗೂ ಪರಿಸರ ಸಂರಕ್ಷಣೆ ಇವೇ ಮುಂತಾದ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಸಂಸ್ಥೆ ಇದಾಗಿದೆ. ಬಿ.ತಿರುಪತಿ ರಾಜು, ಕ್ಯಾ.ಕುಲದೀಪ್ ಸಿಂಗ್ ಮತ್ತು ಇಂಜಿನಿಯರ್ ಕೊಡೂರಿ ರಂಗರಾವ್ ಈ ಸಂಸ್ಥೆಯ ಮೂಲ ಪುರುಷರು, ಈ ಸಂಸ್ಥೆ ನಾರ್ತ್ ಮಲ್ಟಿಪಲ್, ಸೌತ್ ಮಲ್ಟಿಪಲ್, ವೆಸ್ಟ್, ಮಲ್ಟಿಪಲ್, ನೇಪಾಲ್ ಮಲ್ಟಿಪಲ್ ಮತ್ತು ಓವರ್ ಸೀಸ್ ಮಲ್ಟಿಪಲ್ ಅನ್ನುವ 5 ಮಲ್ಟಿಪಲ್ ನ್ನು ಹೊಂದಿ, ಸುಮಾರು 25 ದೇಶಗಳಲಿ, 45 ಸಾವಿರ ಸದಸ್ಯರನ್ನು ಹೊಂದಿದೆ ಎಂದರು.
ಈ ಸಂಸ್ಥೆ ಉಡುಪಿ ಜಿಲ್ಲೆಗೆ 2024-25 ನೇ ಸಾಲಿನಲಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿತ್ತು. ಸೌತ್ ಇಂಡಿಯಾ ಮಲ್ಟಿಪಲ್ ನ ವ್ಯಾಪ್ತಿಯಲ್ಲಿ ಅಲಯನ್ಸ್ ಡಿಸ್ಟ್ರಿಕ್ಟ್ 275-5 ಕಳೆದ ವರ್ಷ ಉಡುಪಿಯಲಿಲ್ಲಿ. ಆರಂಭಗೊಂಡಿತ್ತು. ಈ ವರ್ಷ ಡಿಸ್ಟ್ರಿಕ್ಟ್ ಗವರ್ನರ್ ಆಗಿ ಸುನಿಲ್ ಕುಮಾರ್ ಶೆಟ್ಟಿ, ಪ್ರಥಮ ಉಪ ಜಿಲ್ಲಾ, ಗವರ್ನರ್ ಆಗಿ ಸುಧಾಕರ ಹೆಗ್ಡೆ ಹಾಗೂ ದ್ವಿತೀಯ ಉಪ ಜಿಲ್ಲಾ, ಗವರ್ನರ್ ಆಗಿ ಅಶೋಕ್ ಕುಮಾರ್ ವೈ.ಜಿ ಆಯ್ಕೆಯಾಗಿರುತ್ತಾರೆ. ಇವರೊಂದಿಗೆ ಜಿಲ್ಲಾ ಸಂಪುಟ ಕಾರ್ಯದರ್ಶಿಯಾಗಿ ಕೆ. ರಾಮಚಂದ್ರ ಭಟ್, ಖಜಾಂಜಿಯಾಗಿ ಎಂ. ಕೃಷ್ಣ ಆಳ್ವ ಹಾಗೂ ಡಿಸ್ಟ್ರಿಕ್ಟ್ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಡಾ. ಕೆ. ಜಗದೀಶ್ ಹೊಳ್ಳ, ನಿಯುಕ್ತಿ ಗೊಂಡಿದ್ದಾರೆ
ಡಿಸ್ಟ್ರಿಕ್ಟ್ 275 S ಇದರ ಕ್ಯಾಬಿನೆಟ್ ಪದಪ್ರಧಾನ ಸಮಾರಂಭ ಏಪ್ರಿಲ್ 25ರ ಶನಿವಾರದಂದು ಸಂಜೆ 5 ಘಂಟೆಗೆ ಅಮೃತ್ ಗಾರ್ಡನ್ ನಲ್ಲಿ ಜರಗಲಿದೆ. ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇದರ ಇಂಟರ್ ನ್ಯಾಷನಲ್ ನ ಪ್ರೆಸಿಡೆಂಟ್ ಡಾ. ಬಾಲ ಜಿ. ಶಾಸ್ತ್ರಿ ಇವರು ಡಿಸ್ಟ್ರಿಕ್ಟ್ 275-S ಇದರ ಪದಪ್ರಧಾನ ಸಮಾರಂಭ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಅತಿಥಿ ಅಭ್ಯಾಗತರಾಗಿ ನಿಟ್ಟಿ ವಿಶ್ವವಿದ್ಯಾನಿಲಯ ಇದರ ಉಪಕುಲಪತಿ M.S ಮೂಡಿತ್ತಾಯ, ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಇದರ ಕಾರ್ಯದರ್ಶಿ ಡಾ. ನಾಗರಾಜ ಬೈರಿ, ಅಂತರಾಷ್ಟ್ರೀಯ ನಿರ್ದೇಶಕರಾದ ಡಿ. ಶ್ರೀಧರ ಶೆಣವ, ಮತ್ತು ಅಂತರಾಷ್ಟ್ರೀಯ ಕಮಿಟಿ ಛೇಯರ್‌ಪರ್ಸನ್ ಡಾ. ತಲ್ಲೂರು ಶಿವರಾಮ ಶೆಟ್ಟಿ, ಹಾಗು ಅಂತರಾಷ್ಟ್ರೀಯ ಕಮಿಟ ಛೇಯರ್‌ಪರ್ಸನ್ ಕೆ. ಎಂ. ಮುನಿಯಪ್ಪ ಇವರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪಿಯುಸಿ ಹಾಗೂ ಎಸ್ಎಸ್ಎಲ್ಸಿಯಲ್ಲಿ 95% ಅಂಕ ಗಳಿಸಿದ ಸಂಸ್ಥೆಯ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದರು.
ಈ ವರ್ಷ ಅಲಯನ್ಸ್ ಜಿಲ್ಲಾ, ಕಾರ್ಯಕ್ರಮವಾಗಿ ಪರಿಸರ ಸಂರಕ್ಷಣೆ, ಹಸಿವು ನೀಗಿಸುವಿಕೆ, ಶಿಕ್ಷಣ, ರಸ್ತೆ, ಸುರಕ್ಷತೆ ಮತ್ತು ಟ್ರಾಫಿಕ್ ಜಾಗ್ರತೆ, ಕೃಷಿ ಉತ್ತೇಜನ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಾದಕ ಔಷಧ ದುರ್ಬಳಕೆ ಮತ್ತು ಅದರ ತಡೆಗಟ್ಟುವಿಕೆ ಕುರಿತು ಜಾಗೃತಿ ಇವುಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪದಗ್ರಹಣ ಸಮಿತಿಯ ಚೇರ್ ಮ್ಯಾನ್ ಡಾ. ತಲ್ಲೂರು ಶಿವರಾಮ ಶೆಟ್ಟಿ, ಅಂತಾರಾಷ್ಟ್ರೀಯ ನಿರ್ದೇಶಕ ಶ್ರೀಧರ್ ಶೇಣವ, ಪ್ರಥಮ ಉಪಜಿಲ್ಲಾ, ಗವರ್ನರ್ ಸುಧಾಕರ್ ಹೆಗ್ಡೆ, ದ್ವಿತೀಯ ಉಪ ಜಿಲ್ಲಾ, ಡಿಸ್ಟ್ರಿಕ್ಟ್ P.R.O ಕೆ. ಜಗದೀಶ್ ಹೊಳ್ಳ ಉಪಸ್ಥಿತರಿದ್ದರು.