-->
ಕೇಂದ್ರಸರ್ಕಾರದ 4 ಕಾರ್ಮಿಕ ಸಂಹಿತೆಗೆ ವಿರೋಧ; ಸಿಐಟಿಯು ನಿಂದ ಕಪ್ಪು ದಿನಾಚರಣೆ

ಕೇಂದ್ರಸರ್ಕಾರದ 4 ಕಾರ್ಮಿಕ ಸಂಹಿತೆಗೆ ವಿರೋಧ; ಸಿಐಟಿಯು ನಿಂದ ಕಪ್ಪು ದಿನಾಚರಣೆ


ಕೇಂದ್ರ ಸರಕಾರವು ಜಾರಿ ಮಾಡಿದ 4 ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಇಂದು ಸೆಂಟ್ರಲ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ಕಪ್ಪು ದಿನ ಆಚರಿಸಿತು. 


ಉಡುಪಿ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕರು ಕಪ್ಪು ದಿನ ಆಚರಿಸಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಉಡುಪಿಯಲ್ಲಿ ಸಿಐಟಿಯು ಉಡುಪಿ ವಲಯ ಸಮಿತಿ ನೇತ್ರತ್ವದಲ್ಲಿ ಬಸ್ ನಿಲ್ದಾಣ ಬಳಿ ಕಾರ್ಮಿಕರು ಕಪ್ಪು ದಿನಡಾ ಅಂಗವಾಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ್ ಗೊಲ್ಲ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಿರುವ 4 ಕಾರ್ಮಿಕ ಸಂಹಿತೆಗಳಿಂದ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ.ಕಾರ್ಮಿಕರಿಗೆ ಇನ್ನೂ ಮುಂದೆ ಸವಲತ್ತುಗಳು ಸಿಗಬೇಕಾದರೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ, ಕೆಲಸದ ಅವಧಿಗಳು ಹೆಚ್ಚಳ ಮಾಡಿರುವುದು, ಕಾರ್ಮಿಕರ ಮುಷ್ಕರದ ಹಕ್ಕುಗಳನ್ನು ದುರ್ಬಲ ಗೊಳಿಸಿರುವುದು,ಕಾರ್ಮಿಕ ಸಂಘಗಳ ನೊಂದವಣಿಗಳಲ್ಲಿ ಬದಲಾವಣೆಗಳನ್ನು ಕೇಂದ್ರ ಸರಕಾರ ಇವತ್ತಿನಿಂದ ಜಾರಿಮಾಡಿದೆ.ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಆವಕಾಶ ನೀಡಿದ್ದು, ಇವರಿಗೆ ಸರಿಯಾದ ಸುರಕ್ಷತೆ, ಭದ್ರತೆ,ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಹೇಳಿದರು. ದಲಿತ ಹಕ್ಕುಗಳ ಸಮಿತಿ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಸಂಜೀವ ಬಳ್ಳೂರು, ಬೀಡಿ ಸಂಘದ ಉಡುಪಿ ಅಧ್ಯಕ್ಷ ನಳಿನಿ, ಕಾರ್ಯದರ್ಶಿ ಉಮೇಶ್ ಕುಂದರ್, ಜನವಾದಿ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ಸರೋಜ ಎಸ್, ಸಿಐಟಿಯು ಮುಖಂಡರಾದ ಮೋಹನ್‌, ಗಿರಿಜಾ,ವಸಂತಿ, ಕಟ್ಟಡ ಸಂಘದ ಮುಖಂಡರಾದಸಾರಿಕಾ,ಶರ್ಮಿಳ,ಸೌಮ್ಯ,ಶಾರದ ಉಪಸ್ಥಿತರಿದ್ದರು. ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article