-->
ಟಿಪ್ಪರ್ ಗೆ ಬೈಕ್ ಡಿಕ್ಕಿ; ತಾಯಿ, ಮಗ ಸಾವು

ಟಿಪ್ಪರ್ ಗೆ ಬೈಕ್ ಡಿಕ್ಕಿ; ತಾಯಿ, ಮಗ ಸಾವು



ನಿಂತಿದ್ದ ಟಿಪ್ಪರ್ ಗೆ ಬೈಕೊಂದು ಅತೀ ವೇಗದಿಂದ ಬಂದು ಡಿಕ್ಕಿಯಾಗಿ ತಾಯಿ, ಮಗ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ಕೆಇಬಿ ಬಳಿ ನಡೆದಿದೆ.

ಮೂಡುಬಿದಿರೆ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿ ಪ್ರೇಮಾ ಮತ್ತು ಅವರ ಮಗ ಸೀನ ಮೃತರು.

ಇವರು ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಟಿಪ್ಕರ್  ಗೆ ಇವರ ಬೈಕ್‌ ಹಿಂಬದಿಯಿಂದ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಪ್ರೇಮಾ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸೀನ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article