-->
 ಕಾಪುವಿನಲ್ಲಿ ನಾಡದೋಣಿ ಮಗುಚಿ ಮೀನುಗಾರ ನಾಪತ್ತೆ(Video)

ಕಾಪುವಿನಲ್ಲಿ ನಾಡದೋಣಿ ಮಗುಚಿ ಮೀನುಗಾರ ನಾಪತ್ತೆ(Video)


ಉಡುಪಿಯ ಕಾಪು ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಗೆ ತಮಿಳುನಾಡು ಮೂಲದ ಮೀನುಗಾರರ ದೋಣಿ ಡಿಕ್ಕಿಯಾಗಿ, ದೋಣಿ ಮಗುಚಿ ಬಿದ್ದು ಓರ್ವ ಮೀನುಗಾರ ನಾಪತ್ತೆಯಾದ ಘಟನೆ ನಡೆದಿದೆ. 

ಕಾಪು ಕಡಲ ತೀರದಲ್ಲಿ ತಮಿಳುನಾಡು ಮೂಲದ ಮೀನುಗಾರರ ದೋಣಿ ಅಕ್ರಮವಾಗಿ ಪಚ್ಚಲೆ ತೆಗೆಯುತ್ತಿದ್ದ ವೇಳೆ ವಿಚಾರಿಸಲು ಸ್ಥಳೀಯ ಮೀನುಗಾರರು ದೋಣಿ ಮೂಲಕ ತೆರಳಿದ್ದರು. ಈ ವೇಳೆ ತಮಿಳುನಾಡು ಮೂಲದ ಮೀನುಗಾರರು ದೋಣಿಯನ್ನು ಸ್ಥಳೀಯ ಮೀನುಗಾರರ ದೋಣಿಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ದೋಣಿ ಮಗುಚಿ ಬಿದಿದ್ದು, ನೀರು ಪಾಲಾಗುತ್ತಿದ್ದ ಓರ್ವನನ್ನು ರಕ್ಷಿಸಲಾಗಿದೆ. ಮತ್ತೋರ್ವ ಮೀನುಗಾರ ಕಡಲಿಗೆ ಬಿದ್ದು, ನಾಪತ್ತೆಯಾಗಿದ್ದಾರೆ. ತಮಿಳುನಾಡು ಮೂಲದ ಮೀನುಗಾರರು ದೋಣಿ ಸಮೇತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ತಮಿಳುನಾಡು ಮೂಲದ ಮೀನುಗಾರರು ಅಕ್ರಮವಾಗಿ ಪ್ರವೇಶಿಸಿ ಹಲವು ದಿನಗಳಿಂದ ಕಡಲಿನಲ್ಲಿ ಪಚ್ಚಲೆ ತೆಗೆಯುತ್ತಿದ್ದು, ಈ ಬಗ್ಗೆ ಸಂಬOಧಪಟ್ಟ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಮೀನುಗಾರರು ದೂರಿದ್ದಾರೆ. 





Ads on article

Advertise in articles 1

advertising articles 2

Advertise under the article