-->
ಸಿಂಗಲ್ ಲೇ ಔಟ್ ಗೆ ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರ; ರಘುಪತಿ ಭಟ್ ಅವರಿಂದ ಅನಿರ್ಧಿಷ್ಟಾವಧಿ ಧರಣಿ (video)

ಸಿಂಗಲ್ ಲೇ ಔಟ್ ಗೆ ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರ; ರಘುಪತಿ ಭಟ್ ಅವರಿಂದ ಅನಿರ್ಧಿಷ್ಟಾವಧಿ ಧರಣಿ (video)


ಉಡುಪಿಯ ಬಡ ನಿಡಿಯೂರು ಗ್ರಾಮದ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಿಸಲು ಸಿಂಗಲ್ ಲೇಔಟ್ ಗೆ ಅನುಮತಿ ಪತ್ರ ನೀಡದೆ ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಇಂದಿನಿಂದ ಧರಣಿ ಆರಂಭಿಸಿದ್ದಾರೆ. 


ಬೆಳಗ್ಗೆ 10 ಗಂಟೆ ಸುಮಾರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಶಾಂತಿಯುತವಾಗಿ ಧರಣಿ ಆರಂಭಿಸಿದ್ದಾರೆ. 

ಸ್ಥಳಕ್ಕೆ ಬಂದ ನಗರಾಭಿವೃದ್ಧಿ ಆಯುಕ್ತ ಮಹೇಶ್ ಭೇಟಿ ನೀಡಿದ್ದು, ಎರಡು ದಿನದೊಳಗಡೆ ಕಾನೂನು ಸಲಹೆ ಪಡೆದು ಸರಿಪಡಿಸುವುದಾಗಿ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಘುಪತಿ ಭಟ್ ಅವರು ರೆಸಾರ್ಟ್ ನಿರ್ಮಿಸಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲದೆ ಇದ್ದರೂ ಹಲವಾರು ಕಾರಣಗಳನ್ನ ನೀಡಿ ಸಿಂಗಲ್ ಲೇಔಟಿಗೆ ಅನುಮತಿ ಪತ್ರವನ್ನು ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಕೋರ್ಟ್ ನ ಮೊರೆ ಹೋದರೂ ಹೈಕೋರ್ಟ್ ನ ಆದೇಶಕ್ಕೂ ಯಾವುದೇ ಬೆಲೆ ನೀಡುತ್ತಿಲ್ಲ. ಹೀಗಾಗಿ ತಾನು ಧರಣಿ ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಪ್ರತಿದಿನ ಸಂಜೆ 6 ಗಂಟೆಯವರೆಗೆ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದ ರಘುಪತಿ ಭಟ್ ಅನುಮತಿ ಪತ್ರವನ್ನು ನೀಡುವುದಿಲ್ಲ ಎಂದಾದರೆ ಹಿಂಬರಹ ನೀಡಲಿ ಎಂದು ಆಗ್ರಹಿಸಿದರು.




Ads on article

Advertise in articles 1

advertising articles 2

Advertise under the article