ಉದ್ಯಾವರದ ಕ್ರಿಕೆಟಿಗ ಸಮೀರ್ ಶರೀಫ್ ನಿಧನ
Monday, March 23, 2026
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸಕ್ರಿಯ ಸದಸ್ಯ, ಕ್ರಿಕೆಟಿಗ ಹಾಗೂ ಉತ್ತಮ ಕ್ರೀಡಾ ಪಟು ಉದ್ಯಾವರ ಪಾಂದೆ ನಿವಾಸಿ ಸಮೀರ್ ಶರೀಫ್ (43) ಸೋಮವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಉದ್ಯಾವರ ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯರಾದ ಸಮೀರ್ ಶರೀಫ್ ಪಾಂದೆ ದುಬೈಯಲ್ಲಿ ಉದ್ಯೋಗಿಯಾಗಿದ್ದು, ದುಬೈ ಕನ್ನಡ ಸಂಘ, ಬ್ಯಾರಿ ಸಂಘಟನೆಯ ಸದಸ್ಯರಾಗಿ ಸಮಾಜ ಸೇವಕರಾಗಿ ಹೆಸರುವಾಸಿಯಾಗಿದ್ದರು. .
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.