-->
ರಘುಪತಿ ಭಟ್ ಧರಣಿಗೆ ಮಣಿದ ನಗರಾಭಿವೃದ್ಧಿ ಪ್ರಾಧಿಕಾರ; ಸಿಂಗಲ್ ಲೇಔಟ್ ಗೆ ಅನುಮತಿ ಪತ್ರ ಹಸ್ತಾಂತರ

ರಘುಪತಿ ಭಟ್ ಧರಣಿಗೆ ಮಣಿದ ನಗರಾಭಿವೃದ್ಧಿ ಪ್ರಾಧಿಕಾರ; ಸಿಂಗಲ್ ಲೇಔಟ್ ಗೆ ಅನುಮತಿ ಪತ್ರ ಹಸ್ತಾಂತರ


ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಸಿಂಗಲ್ಪ್ರ ಲೇ ಔಟ್ ನೀಡಲು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ  ಮಣಿದ ನಗರಾಭಿವೃದ್ಧಿ ಪ್ರಾಧಿಕಾರವು ಸಿಂಗಲ್ ಲೇ ಔಟ್ ಗೆ ಅನುಮತಿ ಪತ್ರವನ್ನು ನೀಡಿದೆ. 

ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಿದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಅವರು ಅನುಮತಿ ಪತ್ರವನ್ನು ಹಸ್ತಾಂತರಿಸಿದರು. 

ಉಡುಪಿಯ ಬಡ ನಿಡಿಯೂರು ಸಮೀಪ ರೆಸಾರ್ಟ್ ನಿರ್ಮಿಸಲು ಸಿಂಗಲ್ ಲೇ ಔಟ್ ಗಾಗಿ ಅನುಮತಿ ಪತ್ರ ನೀಡಲು ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ರಘುಪತಿ ಭಟ್ ಅವರು ಮಾರ್ಚ್ 23ರಂದು ಧರಣಿ ಆರಂಭಿಸಿದರು.

ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಕಡಲ ತೀರದಲ್ಲಿ ೧.೬೦ ಎಕರೆ ಜಾಗದಲ್ಲಿ ರೆಸಾರ್ಟ್ ಮಾಡಲು ಯೋಜಿಸಿದ್ದು, ಸಿಂಗಲ್ ಲೇ ಔಟ್ ಗೆ ೨ ವರ್ಷಗಳಿಂದ ಅರ್ಜಿ ಹಾಕಿದರೂ ಬೇರೆ ಬೇರೆ ಕಾರಣ ನೀಡಿ ನಿರಾಕರಿಸಲಾಗಿದೆ ಎಂದು ರಘುಪತಿ ಭಟ್ ಧರಣಿ ನಡೆಸಿದ್ದರು. ಶಾಸಕ ಯಶ್ ಪಾಲ್ ಸುವರ್ಣ ಅವರ ಕುಮ್ಮಕ್ಕಿನಿಂದ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಅನುಮತಿ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

ಅನುಮತಿ ಪತ್ರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ರಘುಪತಿ ಭಟ್, 3 ತಿಂಗಳಲ್ಲಿ ಕೊಡಬೇಕಾದ ಅನುಮತಿ ಪತ್ರ 24 ತಿಂಗಳ ನಂತ್ರ ಸಿಕ್ಕಿದೆ. ಧರಣಿ ಕುಳಿತಾದರೂ ನ್ಯಾಯ ಸಿಕ್ಕಿರುವುದು ಸಂತೋಷ ತಂದಿದೆ. ನಗರಾಭಿವೃದ್ಧಿಯಲ್ಲಿ ಸಾಕಷ್ಟು ಸಮಸ್ಯೆಯಿದೆ. ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಟಿಡಿಆರ್ ಕೊಡುವುದಾಗಿ ಹೇಳಿ 3 ವರ್ಷ ಆದರೂ ಸಿಕ್ಕಿಲ್ಲ. ಇದಕ್ಕೆ ಹೋರಾಟ ಮಾಡಬೇಕು. ಅವ್ಯವಸ್ಥೆ ವಿರುದ್ಧ ನಾಗರಿಕರ ಪರವಾಗಿ ಮುಂದೆ ಹೋರಾಟ ಮಾಡುವುದಾಗಿ ಹೇಳಿದರು. ಮುಂದಿನ ಏ.11 ರ ಒಳಗೆ ಬಾಕಿ ಉಳಿದ ಕಡತಗಳ ವಿಲೇವಾರಿಯಾಗದಿದ್ದರೆ ಧರಣಿ ನಡೆಸುವುದಾಗಿ ಹೇಳಿದರು.

ರಾಜಕೀಯ ದಮನಕ್ಕಾಗಿ ಧರಣಿ ನಡೆಸಿದ್ದಲ್ಲ. ನನ್ನ ವೈಯಕ್ತಿಕ ಸಮಸ್ಯೆಗಳಿಗೆ ಶಾಸಕರು ಅಡ್ಡಿಪಡಿಸಿದ್ದರಿಂದ ಅವರ ಹೆಸರು ಹೇಳಬೇಕಾಯಿತು ಎಂದರು.


Ads on article

Advertise in articles 1

advertising articles 2

Advertise under the article