ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಸದಸ್ಯ ಥ್ರೋಡೌನ್ ಸ್ವೆಷಲಿಸ್ಟ್ ರಾಘವೇಂದ್ರ ( ರಘು) ಅವರು ಇಂದು ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಕೃಷ್ಣನ ದರ್ಶನ ಪಡೆದು ರಥೋತ್ಸವದಲ್ಲಿ ಭಾಗಿಯಾಗಿ ಬಳಿಕ ಪರ್ಯಾಯ ಶ್ರೀಪಾದರಿಗೆ ತನಗೆ ಬಂದ ಪದಕವನ್ನು ತೋರಿಸಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದು ಪ್ರಸಾದ ಸ್ವೀಕರಿಸಿದರು.