ಮಾ.27: ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್ ಸಬಲೀಕರಣ ಕಾರ್ಯಕ್ರಮ
Tuesday, March 24, 2026
UBUNTU Consortium Bengaluru, POWER FLATFORM of WOMEN Entrepreneurs UDUPI, United Nations Economic and Social Commission for Asia and the Pacific ಇವರ ಸಹಯೋಗದಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಡಿಜಿಟಲ್ ಸಬಲೀಕರಣ ಕಾರ್ಯಕ್ರಮವನ್ನು ಮಾರ್ಚ್ 27 ರಂದು ಬೆಳಿಗ್ಗೆ 10ರಿಂದ ಸಂಜೆ 4.00 ಗಂಟೆ ಯ ವರೆಗೆ ಮಣಿಪಾಲ ಡಾ. ಟಿ.ಎಂ.ಎ ಪೈ ಪಾಲಿ ಟೆಕ್ನಿಕ್ ಕಾಲೇಜು ಕ್ಯಾಂಪಸ್ ನ ಸ್ಕಿಲ್ ಡೆವಲಪ್ ಮೆಂಟ್ ಸೆಂಟರ್ ಇಲ್ಲಿ ನಡೆಯಲಿದೆ ಎಂದು ಉಡುಪಿ ಪವರ್ ಇದರ ಅಧ್ಯಕ್ಷೆ ವೀಣಾ ಕುಡ್ವ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮಹಿಳೆಯರು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶ. ನಿರ್ಮಾಣ, ವಿಷಯ ರಚನೆ, ಗ್ರಾಹಕರೊಂದಿಗೆ ಸಂವಹನ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ತಂತ್ರದ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಈ ಕಾರ್ಯಕ್ರಮದ ಮೂಲಕ ಮಹಿಳಾ ಉದ್ಯಮಿಗಳು ತಮ್ಮ ವ್ಯವಹಾರವನ್ನು ಡಿಜಿಟಲ್ ವೇದಿಕೆ ಬಲಪಡಿಸಿ, ಹೊಸ ಗ್ರಾಹಕರನ್ನು ಆಕರ್ಷಿಸಿ, ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.
ಆಸಕ್ತ ಮಹಿಳಾ ಉದ್ಯಮಿಗಳಿಗಾಗಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಭಾಗವಹಿಸಿದ ಪ್ರತಿನಿಧಿಗಳಿಗೆ ಡೆಲಿಗೇಟ್ ಕಿಟ್, ಪ್ರಮಾಣಪತ್ರ ಒದಗಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುಜಯ ಶೆಟ್ಟಿ, ರತಿಭ ರವಿ, ಮಾಲಿನಿ ಬಂಗೇರ, ರೇಣು ಜಯರಾಮ್, ನೀತಾ ಶೆಟ್ಟಿ ಉಪಸ್ಥಿತರಿದ್ದರು.