ಮಾಜಿ ಪತ್ರಕರ್ತ ಗಣೇಶ್ ಪ್ರಭು ನಿಧನ
Sunday, April 19, 2026
ದಿ ಹಿಂದೂ ಪತ್ರಿಕೆಯ ಮಾಜಿ ವರದಿಗಾರ, ಉಡುಪಿ ಅಲಂಕಾರ ಟಾಕೀಸ್ ಹಿಂಬದಿಯ ಮಾತೋಶ್ರೀ ಅಪಾರ್ಟ್ ಮೆಂಟ್ ನಿವಾಸಿ ಗಣೇಶ್ ಪ್ರಭು(58) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಮಾರು 25 ವರ್ಷಗಳ ಕಾಲ ದಿ ಹಿಂದೂ ಪತ್ರಿಕೆಯ ಉಡುಪಿಯ ವಿಶೇಷ ವರದಿಗಾರರಾಗಿ ಸೇವೆ ಸಲ್ಲಿಸಿದ್ದ ಗಣೇಶ್ ಪ್ರಭು ಅವರು ಬಳಿಕ ಬೆಂಗಳೂರಿನ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಸೇವೆ ಸಲ್ಲಿಸಿದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಪ್ರಭು ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.