-->
ನಾಗರಮಠದಲ್ಲಿ ಅಧಿಕೃತ ಮರಳುಗಾರಿಕೆ ಬಗ್ಗೆ ಅನಗತ್ಯ ಸುಳ್ಳು ಆರೋಪ: ಕುಶಕುಮಾರ್

ನಾಗರಮಠದಲ್ಲಿ ಅಧಿಕೃತ ಮರಳುಗಾರಿಕೆ ಬಗ್ಗೆ ಅನಗತ್ಯ ಸುಳ್ಳು ಆರೋಪ: ಕುಶಕುಮಾರ್


ಬ್ರಹ್ಮಾವರ ತಾಲೂಕು ಹೊಸಾಳ ಸಮೀಪದ ನಾಗರಮಠದಲ್ಲಿ ಜಿಲ್ಲಾಡಳಿತದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮೂಲಕ ಅಧಿಕೃತ ಮರಳು ಬ್ಲಾಕ್ ಗುತ್ತಿಗೆ ಪಡೆದು ಮರಳುಗಾರಿಕೆ ಮಾಡಲು ಸ್ಥಳೀಯ ಕೆಲವೊಂದು ಸ್ವಹಿತಾಸಕ್ತಿ ಹೊಂದಿದ ವ್ಯಕ್ತಿಗಳಿಂದ ಅನ್ಯಾಯವಾಗುತ್ತಿದ್ದು ಕಳೆದ 3 ತಿಂಗಳಿನಿಂದ ಗುಂಪು ಕಟ್ಟಿಕೊಂಡು ಕೆಲವೊಂದು ಪಟ್ಟಭದ್ರ ಹಿತಾಸಕ್ತಿಯುಳ್ಳವರು ತೊಂದರೆ ನೀಡುತ್ತಿದ್ದಾರೆ ಎಂದು ಗುತ್ತಿಗೆದಾರ ಬಿ. ಕುಶಕುಮಾರ್ ಆರೋಪಿಸಿದ್ದಾರೆ. 

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬ್ರಹ್ಮಾವರದ ನಾಗರಮಠದಲ್ಲಿ ಮರಳು ಬ್ಲಾಕ್ ಸಂಖ್ಯೆ ಡಿ ಎಸ್ ಬಿ 5 ರಂದಲ್ಲಿ ಮರಳುಗಾರಿಕೆ ಮಾಡಲು ಬಿ ಕುಶಕುಮಾರ್ ಆದ ನನಗೆ ಜಿಲ್ಲಾಡಳಿತ ಅಧಿಕೃತ ಅನುಮತಿ ನೀಡಿದೆ. ಟೆಂಡ‌ರ್ ಅನುಮತಿ ಪಡೆದ ಬಳಿಕ ಸ್ಥಳೀಯ ಅನಧಿಕೃತವಾಗಿ ಮರಳುಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ನಮ್ಮಿಂದ ಅನಾವಶ್ಯಕವಾಗಿ ಹಣಕ್ಕಾಗಿ ಒತ್ತಡ ಹೇರುತ್ತಿದ್ದು, ಸ್ಥಳೀಯ ಕೆಲವೊಂದು ವ್ಯಕ್ತಿಗಳಿಗೆ ಸುಳ್ಳು ಮಾಹಿತಿ ನೀಡಿ ಅಧಿಕೃತ ಗುತ್ತಿಗೆದಾರರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಮರಳುಗಾರಿಕೆ ಮಾಡಿದರೆ ಕೃಷಿ ಭೂಮಿಗೆ ತೊಂದರೆಯಾಗುತ್ತದೆ . ಅಲ್ಲದೆ ನದಿ ಕೊರೆತ ಆಗುತ್ತದೆ ಎನ್ನುವ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾಧ್ಯಮಗಳಿಗೆ, ಸ್ಥಳೀಯರಿಗೆ ಸುಳ್ಳು ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ ಎಂದರು. 

ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿರುವ ದಿನೇಶ್ ಗಾಣಿಗ ಮತ್ತು ಕೃಷ್ಣ ಎಂಬವರು ತಮ್ಮ ಸ್ವಾರ್ಥ ಸಾಧನೆಗೆ ಮುಗ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಹಿಂದೆ ನದಿಯಲ್ಲಿ ಮರಳಿನ ಹೂಳು ತುಂಬಿದ್ದು ಇದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನೆ ಮಾಡಿದವರು ಈಗ ಕಾನೂನು ಬದ್ಧ ಮರುಳುಗಾರಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತ್ತಿದ್ದಾರೆ. ಅವರು ಹೇಳುವಂತೆ ಯಾವುದೇ ರೀತಿಯ ಅಕ್ರಮಗಳು ಇಲ್ಲಿ ನಡೆದಿಲ್ಲ ಕಾನೂನು ಬದ್ಧವಾದ ಸರ್ವೆ ನಡೆಸಿದ ಬಳಿಕವೇ ಜಿಲ್ಲಾಡಳಿತ ಕುಶ ಅವರಿಗೆ ಪರವಾನಿಗೆ ನೀಡಿದ್ದು ಸುದ್ದಿಗೋಷ್ಠಿಯಲ್ಲಿ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಪ್ಪು ಸರ್ವೆ ನಂಬರ್ ನೀಡಿ ಗುತ್ತಿಗೆ ಪಡೆಯಲಾಗಿದೆ ಎಂದು ಆರೋಪ ಮಾಡಿದ್ದು ಮರಳಿನ ಟೆಂಡರ್ ಪ್ರಕ್ರಿಯೆ ಈ-ಪ್ರೊಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ನಡೆಯುವುದು ಮತ್ತು ಇದರಲ್ಲಿ ಸೂಕ್ತ ಸರ್ವೆ ನೀಡಿಯೇ ನೋಂದಾಯಿಸಿಕೊಂಡಿದ್ದು ಅವರ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದರು. 

ಪ್ರಸ್ತುತ ಸ್ಯಾಂಡ್ ಬ್ಲಾಕ್ ಗುತ್ತಿಗೆ ನೀಡಿರುವ ಸ್ಥಳದಲ್ಲಿ ದೊಡ್ಡ ಮಟ್ಟದ ಮರಳು ದಿಬ್ಬ ರಚನೆಯಾಗಿದ್ದು ಇದನ್ನು ತೆರವು ಮಾಡದೆ ಹೋದರೆ ತೆಕ್ಕಟ್ಟೆ, ಚಿತ್ರಪಾಡಿ, ಬನ್ನಾಡಿ, ಗಿಳಿಯಾರ ನಾಗರಮಠ ಪರಿಸರದ ಕೃಷಿ ಭೂಮಿಯಲ್ಲಿ ನೀರು ನಿಂತು ತೊಂದರೆ ಆಗುತ್ತದೆ. ನದಿಯ ಮಧ್ಯೆ ಮರಳು ದಿಬ್ಬ ಏರ್ಪಟ್ಟ ಹಿನ್ನಲೆಯಲ್ಲಿ ನದಿ ಇಬ್ಬಾಗವಾಗಿ ಹರಿಯುತ್ತಿದ್ದು ಇದರಿಂದ ನದಿದಂಡ ಕೊಚ್ಚಿಕೊಂಡು ಹೋಗುತ್ತಿದೆ ಆದ್ದರಿಂದ ಮರಳು ದಿಬ್ಬ ತೆರವುಗೊಳಿಸುವುದು ಅನಿವಾರ್ಯವಾಗಿದೆ. ಅದೇ ಉದ್ದೇಶದಿಂದ ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತ ಟೆಂಡರ್ ಪ್ರಕ್ರಿ ನಡೆಸಿದ್ದು ಇದರಲ್ಲಿ ಕುಶಕುಮಾರ್ ಆದ ನಾನು ಭಾಗವಹಿಸಿ ಅದರ ಗುತ್ತಿಗೆಯನ್ನು ಕಾನೂನು ಪ್ರಕಾರವೇ ಪಡೆದುಕೊಂಡಿದ್ದರೂ ಕೂಡ ಸ್ಥಳಿಯ ಕೆಲವರು ವಿನಾಕಾರಣ ಸಮಸ್ಯೆ ಮಾಡುತ್ತಿದ್ದಾರೆ.  ಈ ಹಿಂದೆ ಕಾರ್ಕಡ ಭಾಗದಲ್ಲಿ ಕೂಡ ಮರಳುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟಗಾರ ಎನ್ನುವ ವ್ಯಕ್ತಿಗಳು ಸೇರಿಕೊಂಡು ಸುಳ್ಳು ಮಾಹಿತಿ ನೀಡಿ ಸ್ಥಳೀಯ ಜನರನ್ನು ಎತ್ತಿ-ಸಮಸ್ಯೆಗಳನ್ನು ಸೃಷ್ಟಿಸಿದ್ದರು. ಅಲ್ಲದೇ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದೇವೆ ಎಂಬ ಆರೋಪ ಹೊತ್ತು ನಮ್ಮ ವಿರುದ್ಧ ಚೆನ್ನೈ ಹಸಿರು ಪೀಠಕ್ಕೆ ದೂರು ದಾಖಲಿಸಿದ್ದು, ವಿಚಾರಣೆ ನಡೆಸಿದ ಹಸಿರುಪೀಠ ಇವರ ವಾದದಲ್ಲಿ ಹುರುಳಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ. ಮರಳುಗಾರಿಕೆಗೆ ತಡೆ ನೀಡಲು ಹಸಿರು ಪೀಠಕ್ಕೆ ಇದೇ ವ್ಯಕ್ತಿಗಳು ದೂರು ದಾಖಲಿಸಿದು ವಿಚಾರಣೆ ನಡೆಸಿದ ಹಸಿರುಪೀಠ ಇವರ ಅಲ್ಲದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದೇವೆ ಎಂಬ ಆರೋಪ ಹೊತ್ತು ನಮ್ಮ ವಿರುದ್ಧ ಚನ್ನೆ. ಕೋರಿ ಹೈಕೋರ್ಟ್ ನಲ್ಲಿ ಮೂರು ಬಾರಿ ವಾದ ನಡೆದರೂ ನ್ಯಾಯಾಲಯ ಯಾವುದೇ ರೀತಿಯ ತಡೆ ನೀಡಿಲ್ಲ ಎಂದರು.

ಮರಳುಗಾರಿಕೆಯಿಂದ ತಮ್ಮ ಜಾಗ ನದಿಯಲಿದೆ ಎಂದು ಆರೋಪಿಸುವವರಿಗೆ ಈಗಾಗಲೇ ತಹಶೀಲ್ದಾರ್ ಅವರು ಅಂತಹ ದೂರುಗಳಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹದ್ದುಬಸ್ತಿಗೆ ಹಾಕಲು ಮನವಿ ಸಲ್ಲಿಸುವಂತೆ ತಿಳಿಸಿರುತ್ತಾರೆ . ಆದರೆ ಈ ವರೆಗೆ ಅಂತಹ ಯಾವುದೇ ಕೆಲಸ ಆರೋಪ ಮಾಡಿರುವವರಿಂದ ನಡೆದಿಲ್ಲ. ಕೇವಲ ವೈಯುಕ್ತಿಕ ಹೊಟ್ಟೆ ಉರಿಗಾಗಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದರು. 

ಮರಳು ತೆಗೆಯಬಾರದು ಎಂದು ಹೇಳಿ ಪ್ರತಿಭಟನೆ ಮಾಡುವ ವ್ಯಕ್ತಿಗಳು ಅನಧಿಕೃತವಾಗಿ ರಾತ್ರಿಹೊತ್ತು ಅದೇ ಮರಳು ದಿಬ್ಬದಿಂದ ಮರಳನ್ನು ತೆರವುಗೊಳಿಸಿ ಬೆರೊಂದು ಕಡೆ ರಾಶಿ ಹಾಕಿ ಅದನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದು ಇದಕ್ಕೆ ಸಂಬಂಧಿಸಿದ ಪೂರ್ಣ ದಾಖಲೆಗಳನ್ನು ನಮ್ಮಲ್ಲಿ ಇದೆ. ಇಲ್ಲಿ ಪ್ರತಿಭಟನೆ ಮಾಡುತ್ತಿರುವ ವ್ಯಕ್ತಿಗೆ ತುಂಡು ಭೂಮಿ ಕೂಡ ಈ ಭಾಗದಲ್ಲಿ ಇಲ್ಲದೆ ಇದ್ದರೂ ಉದ್ದೇಶಪೂರ್ವಕವಾಗಿ ಅಧಿಕೃತ ಗುತ್ತಿಗೆದಾರರಿಗೆ ತೊಂದರೆ ನೀಡಬೇಕು ಎನ್ನುವುದು ಅನಧಿಕೃತ ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ಹುನ್ನಾರವಾಗಿದೆ ಎಂದರು. 

ಅನಧಿಕೃತ ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ವಿಪರೀತ ಉಪಟಳದ ಪರಿಣಾಮವಾಗಿ ಪೊಲೀ ಭದ್ರತೆಯಲ್ಲಿ ಮರಳನ್ನು ತೆಗೆದು ಸೂಕ್ತ ರಾಜಧನವನ್ನು ಪಾವತಿ ಮಾಡಿಕೊಂಡು ಜಿಲ್ಲಾಡಳಿತದ ನಿಯಮಗಳಿಗೆ ಬದ್ಧವಾಗಿ ಮರಳು ತೆಗೆಯುವ ಪರಿಸ್ಥಿತಿ ಅಧಿಕೃತ ಗುತ್ತಿಗೆದಾರರಿಗೆ ಒದಗಿಬಂದಿದೆ.  ಯಾರನ್ನೋ ಬೆದರಿಸುವ ಉದ್ದೇಶದಿಂದ ಪೊಲೀಸ್ ಭದ್ರತೆಯಲ್ಲಿ ಮರಳು ತೆಗೆಯಲು ಆರಂಭಿಸಿಲ್ಲ.  ಬದಲಾಗಿ ನ್ಯಾಯಯುತವಾಗಿ ಮರಳು ತೆಗೆಯುವ ಸಂದರ್ಭದಲ್ಲಿ ವಿನಾಕಾರಣ ಮಹಿಳೆಯರನ್ನು ಮುಂದೆ ಛೂ ಬಿಟ್ಟು ಸಮಸ್ಯೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಎರಡು ಮೂರು ಬಾರಿ ನಮ್ಮ ಮರಳು ವಾಹನಗಳನ್ನು ವಿನಾಕಾರಣ ಅಡ್ಡ ಹಾಕಿ ನಮ್ಮ ವಾಹನಗಳ ಚಾಲಕರಿಗೆ ಹಲ್ಲೆ ನಡೆಸುವಂತ ಪ್ರಯತ್ನ ಕೂಡ ನಡೆಸಿ, ಬಳಿಕ ಸುಳ್ಳು, ದೂರು ದಾಖಲಿಸಿದ ಘಟನೆ ನಡೆದಿದೆ. ಆದ್ದರಿ ಯಾವುದೇ ರೀತಿಯ ಅನಾಹುತ ಸಂಭವಿಸದಿರಲಿ ಎಂಬ ಮುಂಜಾಗ್ರತೆಯಿಂದ ಪೊಲೀಸ್ ಭದ ಪಡೆಯಲಾಗಿದೆ ಎಂದರು. 

ಈಗಾಗಲೇ ಸುಮಾರು 40ಕ್ಕೂ ಅಧಿಕ ಉತ್ತರ ಭಾರತದ ಕಾರ್ಮಿಕರನ್ನು ಮೂರು ತಿಂಗಳಿನಿಂದ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ವೃತಾ ಅವರ ಖರ್ಚುವೆಚ್ಚಗಳನ್ನು ಭರಿಸುವ ಪರಿ ನಿರ್ಮಾಣವಾಗಿದೆ. ಇಂತಹ ಅನಧಿಕೃತ ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಸುದ್ದಿಗೋಷ್ಟಿಯಲ್ಲಿ ಅನಿಲ್ ಕುಮಾರ್ ಶೆಟ್ಟಿ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article