-->
  ಮಾವಿನಕಾಯಿ ಕೊಯ್ಯುವಾಗ ಹೈಟೆನ್ಶನ್ ತಂತಿ ತಗುಲಿ ಜಿಲ್ಲಾಧಿಕಾರಿ ಕಚೇರಿ ಜವಾನ ಸಾವು

ಮಾವಿನಕಾಯಿ ಕೊಯ್ಯುವಾಗ ಹೈಟೆನ್ಶನ್ ತಂತಿ ತಗುಲಿ ಜಿಲ್ಲಾಧಿಕಾರಿ ಕಚೇರಿ ಜವಾನ ಸಾವು


ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಜಿಲ್ಲಾಧಿಕಾರಿ ಕಚೇರಿ ಎಟೆಂಡರ್ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ನಡೆದಿದೆ. 

ಕುಕ್ಕೆಕಟ್ಟೆ  ಡಯಾನ ಟಾಕೀಸ್ ಬಳಿಯ ಕೃಷ್ಣಾಂಜನೇಯ ನಿಲಯದ ನಿವಾಸಿ ಮೂಲತ: ಗ್ರಾಮ ಸಹಾಯಕರಾಗಿರುವ ಸದಾನಂದ ಶೇರಿಗಾರ್  (53) ಮೃತಪಟ್ಟವರು. ಇವರು ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾವಿನಕಾಯಿ ಕೊಯ್ಯುವಾಗ ಅಲ್ಲೇ ಹಾದು ಹೋಗಿದ್ದ ಹೈಟೆನ್ಶನ್ ತಂತಿಗೆ ತಾಗಿದೆ. ತೀವ್ರ ಅಸ್ವಸ್ಥಗೊಂಡ ಸದಾನಂದ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article