ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆರ್ಗ ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ 100% ಫಲಿತಾಂಶ
Friday, April 24, 2026
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆರ್ಗ ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢ ಶಾಲೆಗೆ 100 ಶೇಕಡಾ ಫಲಿತಂಶಾ ಬಂದಿದೆ.
32 ವಿದ್ಯಾರ್ಥಿಗಳು ಕೂಡಾ ತೇರ್ಗಡೆಯಾಗುವ ಮೂಲಕ ಶಾಲೆಗೆ 100 ಶೇಕಡಾ ಫಲಿತಾಂಶ ತಂದಿದ್ದಾರೆ.
ಆಂಗ್ಲ ಮಾದ್ಯಮದ ನೇತ್ರ ಎಸ್ ಅರಳಿ 598(95.2%) ಅಂಕ ಪಡೆದು ಪ್ರಥಮ, ಮೇಘನ 595 (95.68%) ಅಂಕ ಪಡೆದು ದ್ವಿತೀಯ ಹಾಗೂ ತನ್ವಿ 592 (94.78) ತೃತೀಯ ಸ್ಥಾನ ಪಡೆದಿದ್ದಾರೆ.
ಕನ್ನಡ ಮಾದ್ಯಮದಲ್ಲಿ ಸುಶ್ಮಿತಾ ಹಂಡೆನ್ನವರ್ 524 (83.84%), ಮಣಿಕಾಂತ ರಾಘನಿ 524 (83.84%) ಪ್ರಥಮ, ರಾಜೇಶ್ವರಿ ಹನಮಪ್ಪ ಮಾದರ್ 516 (82.56%) ದ್ವಿತೀಯ, ದರ್ಶನ್ ಬಸವರಾಜ್ ಜಂಬಗಿ 505 (80.8%) ತೃತೀಯ ಸ್ಥಾನ ಪಡೆದಿದ್ದಾರೆ.
ಭುವನ್ ಪಾಟೀಲ್ 560 (89.6%), ದೀಕ್ಷಾ ಪ್ರಭು 556 (88.96%), ಸೌರಭ ಸಾಮಂತ 556 (88.96%), ಸಂಜನಾ 552 (88.32%), ಗ್ರೀಷ್ಮ 543 (86.88%) ಅಂಕ ಗಳಿಸುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುಕೇಶ್ ಕುಂದರ್ ಹೆರ್ಗ ಆಭಿನಂದೆ ಸಲ್ಲಿಸಿದ್ದಾರೆ.