ಉಡುಪಿ ಜಿಲ್ಲಾ ನಾಗರೀಕ ಸಮಿತಿ ವತಿಯಿಂದ ಬಸವ ಜಯಂತಿ, ಅಕ್ಷಯ ತೃತೀಯ ಕಾರ್ಯಕ್ರಮ
Tuesday, April 21, 2026
ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಆಯೋಜನೆಯಲ್ಲಿ ಡಯಾನ ಸ್ಟೋರ್ ಸಹಕಾರದೊಂದಿಗೆ ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ ಕಾರ್ಯಕ್ರಮವು ಉಡುಪಿಯ ಮಾರುಥಿ ವೀಥಿಕಾದಲ್ಲಿ ಸೋಮವಾರ ಜರುಗಿತು.
ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ.ರಾಧಾಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಪೂಜಾ ಪ್ರಕ್ರಿಯೆಗಳು ನಡೆದವು.
ದೇಶದ ಬೆನ್ನೆಲುಬು ಆದ ಕೃಷಿಕರ ಬದುಕು ಹಸನಾಗಬೇಕು. ದವಸ ಧಾನ್ಯಗಳು ಅಕ್ಷಯಗೊಳ್ಳಬೇಕು ಎನ್ನುವ ಸಂಕಲ್ಪದೊಂದಿಗೆ ಅಕ್ಷಯ ತೃತೀಯಾ ಆಚರಿಸಲಾಯಿತು. ಪೂಜೆಯಲ್ಲಿ 36 ಪ್ರಬೇಧದ ಏಕದಳ, ದ್ವಿದಳ ಧಾನ್ಯಗಳನ್ನು ಪೊಜೆಯಲ್ಲಿ ಬಳಸಲಾಗಿತ್ತು. ಬಳಿಕ ಅವುಗಳನ್ನು ಭಕ್ತರಿಗೆ ವಿತರಿಸಲಾಯಿತು. ಬಸವ ಜಯಂತಿಯ ಪ್ರಯುಕ್ತವಾಗಿ ಬಸ್ಸವಣ್ಣರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಸಕಾಲದಲ್ಲಿ ಮಳೆ ಬರಲು ಪ್ರಾರ್ಥಿಸಲಾಯಿತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತೆ ಗಾಯಕಿ ಮಾಯಾ ಕಾಮತ್ ಮತ್ತು ಶಿಷ್ಯಬಳಗ ಹಾಗೂ ಕಾಪುವಿನ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು. ಶೋಭಾ ಆರ್ ಶೇಟ್ ಬಿಡಿಸಿದ ರಂಗೋಲಿ ಗಮನ ಸೆಳೆಯಿತು. ಮಾಧವಾಶ್ರಮ ಕ್ಯಾಟರಿಂಗಿನ ಸುದರ್ಶನ್ ನಾಯಕ್ ಅವರಿಂದ ಸಿಹಿಖಾದ್ಯದ ವಿತರಣೆ ನಡೆಯಿತು. ನಾಗರೀಕ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.