ತೆಂಕನಿಡಿಯೂರು ಕಾಲೇಜಿನಲ್ಲಿ ಒಳಾಂಗಣ ಸಭಾಂಗಣದ ವೇದಿಕೆ, ಶುದ್ಧ ಜಲ ಘಟಕ ಲೋಕಾರ್ಪಣೆ
Monday, April 27, 2026
ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಿರ್ಮಿಸಿರುವ ಒಳಾಂಗಣ ಸಭಾಂಗಣದ ವೇದಿಕೆ ಮತ್ತು ಶುದ್ಧ ಜಲ ಘಟಕವನ್ನು ಲಯನ್ಸ್ ಜಿಲ್ಲಾ ಗವರ್ನರ್ ಸಪ್ನ ಸುರೇಶ್ ಅವರು ಉದ್ಘಾಟಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷರಾದ ದಿನೇಶ್ ಕಿಣಿ, ವಲಯಾಧ್ಯಕ್ಷ ಲುಯಿಸ್ ಲೋಬೊ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಹೆಗ್ಡೆ, ಲಯನ್ಸ್ ಕ್ಲಬ್ ಉಡುಪಿ ಕೋಶಾಧಿಕಾರಿ ರಮಾನಂದ ನಾಯಕ್, ಬೋಧಕ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


