ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ 'ಕರ್ತೃತ್ವ ಸಮಗ್ರ ಸಮ್ಮಾನ್ ' ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿರುತ್ತದೆ. ಪ್ರಶಸ್ತಿ ಯನ್ನು ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ಶ್ರೀ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರದಾನ ಮಾಡಲಿದ್ದಾರೆ.