-->
ಉಡುಪಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಭಗವಾನ್ ದಾಸ್ ಆಯ್ಕೆ

ಉಡುಪಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್, ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಭಗವಾನ್ ದಾಸ್ ಆಯ್ಕೆ


ಉಡುಪಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಎಮ್. ಭಗವಾನ್ ದಾಸ್ ಕೆ​ ಆಯ್ಕೆಯಾದರು. ಕಾರ್ಯದರ್ಶಿ​ ಕೆ. ಮಹೇಶ್ ಕಾಮತ್​, ಖಜಾಂಚಿ​ ಅಮಿತ್ ಅರವಿಂದ್ ನಾಯಕ್​ ಆಯ್ಕೆಯಾಗಿದ್ದಾರೆ. 

ಭಗವಾನ್ ದಾಸ್ ಅವರು, ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದು, ಸುಮಾರು 14 ವರ್ಷಗಳ ಕಾಲ ಜಂಟಿ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 25 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಆಗಿನ ಜಿಲ್ಲಾಧಿಕಾರಿಗಳ​ ಮಾರ್ಗದರ್ಶನದಲ್ಲಿ ಸಂಘವು ರಚನೆಯಾಗಿತ್ತು. ಸದಸ್ಯರು, ವಿಶೇಷವಾಗಿ ಯುವ ಎಂಜಿನಿಯರ್‌ ಗಳು, ವಲಯ ನಿಯಮಗಳು ಮತ್ತು ಕಟ್ಟಡ ಮಾರ್ಗಸೂಚಿಗಳನ್ನು ಒಳಗೊಂಡಂತೆ ಉಡುಪಿ ಪಟ್ಟಣ ಯೋಜನಾ ನಿಯಮಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು.​ ಸಹ ಎಂಜಿನಿಯರ್‌ಗಳನ್ನು ಉತ್ತಮವಾಗಿ ಬೆಂಬಲಿಸಲು ಮತ್ತು ಯೋಜನೆ ಮತ್ತು ನಿರ್ಮಾಣ ದಲ್ಲಿ ಗ್ರಾಹಕರಿಗೆ ಮಾರ್ಗದರ್ಶನ ನೀಡ ಬೇಕು ಎಂದು ಎಮ್. ಭಗವಾನ್ ದಾಸ್ ಕೆ ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article