-->
  ಮೇ. 14-16: ಬಲಾಯಿಪಾದೆ  ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ಧಾರ್ಮಿಕ ಕಾರ್ಯಕ್ರಮ

ಮೇ. 14-16: ಬಲಾಯಿಪಾದೆ ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ಧಾರ್ಮಿಕ ಕಾರ್ಯಕ್ರಮ


ಶ್ರೀ ನಾರಾಯಣ ಗುರು ಯುವ ವೇದಿಕೆ ವತಿಯಿಂದ ಯುವವಾಹಿನಿ ಉಡುಪಿ ಘಟಕ ,ಶ್ರೀ ರಾಮಕೃಷ್ಣ ಭಜನಾ ಮಂಡಳಿ, ಬಿಲ್ಲವ ಸೇವಾ ಸಂಘ ಕುತ್ಪಾಡಿ , ಬೊಲ್ಜೆ ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಮಂಡಳಿ,ಉದ್ಯಾವರ  ಇವರಿಂದ ಮೇ. 14ರಿಂದ 16ರವರೆಗೆ ಬಲಾಯಿಪಾದೆಯ ಶ್ರೀ ನಾರಾಯಣ ಗುರು ಉದ್ಯಾನವನದಲ್ಲಿ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.


ಮೇ.14ರಂದು ಸಂಜೆ 6:30ಕ್ಕೆ ಯುವವಾಹಿನಿ (ರಿ) ಉಡುಪಿ ಇವರಿಂದ ಸದ್ಭಕ್ತಿ ,ಸಂದೇಶ ,ಸಮೃದ್ಧಿ  - ಗುರು ಸತ್ಸಂಗ. ಮೇ. 15 ರ ಸಂಜೆ 6:30ಕ್ಕೆ ಶ್ರೀ ರಾಮಕೃಷ್ಣ ಭಜನಾ ಮಂಡಳಿ ,ಬಿಲ್ಲವ ಸೇವಾ ಸಂಘ ಕುತ್ಪಾಡಿ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ, ಮೇ.16 ರ ಸಂಜೆ 6 ಗಂಟೆಗೆ ಶ್ರೀ ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾ ಮಂಡಳಿ , ಬೊಳ್ಜೆ,ಉದ್ಯಾವರ ಇದರ ಸದಸ್ಯರಿಂದ ಮತ್ತು ಅತಿಥಿ ಕಲಾವಿದರಿಂದ  ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ ಎಂದು ಉಡುಪಿ ಶ್ರೀ ನಾರಾಯಣ ಗುರು ಯುವ ವೇದಿಕೆಯ  ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



Ads on article

Advertise in articles 1

advertising articles 2

Advertise under the article