ಕರಾವಳಿ ಸೊಗಡಿನ "ಮಂಗಮಾಯ" ಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್
Saturday, May 09, 2026
ಪುತ್ತೂರು ಬ್ರದರ್ಸ್ ಎಂಟರ್ಟೇನ್ಮೆಂಟ್ ನಿರ್ಮಾಣದ ಕನ್ನಡ ಸಿನಿಮಾ 'ಮಂಗಮಾಯ' ರಾಜ್ಯದಾದ್ಯಂತ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರಾವಳಿ ಕನ್ನಡ ಭಾಷಾ ಶೈಲಿಯಲ್ಲಿ ಮೂಡಿಬಂದಿರುವ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿದೆ.
ಮಂಗಮಾಯ ಸಿನಿಮಾ ನೈಜ ಘಟನೆಗಳಿಂದ ಪ್ರೇರಿತವಾದ ಕಥೆಯಾಗಿದ್ದು, ಲಾಡ್ಜ್ ಒಂದರಲ್ಲಿ ಕೆಲಸ ಮಾಡುವ ಯುವಕನ ಸುತ್ತ ಸುತ್ತುತ್ತದೆ. ಅವಮಾನ ಮತ್ತು ಅನ್ಯಾಯದಿಂದ ಬೇಸತ್ತ ಆತ, ಹಣವನ್ನು ಕದಿಯಲು ಹೋಗಿ ಕಟ್ಟಡವೊಂದರಲ್ಲಿ ಸಿಲುಕಿಕೊಳ್ಳುತ್ತಾನೆ. ತನ್ನ ಸೇಡನ್ನು ಹಾಸ್ಯದ ಮೂಲಕ ಹೇಗೆ ತೀರಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ವಿಶೇಷ. ಚಿತ್ರವನ್ನು ಪ್ರಸಾದ್ ಪುತ್ತೂರು ಅವರು ನಿರ್ದೇಶಿಸಿದ್ದಾರೆ. ಪ್ರಸನ್ನ ಪುತ್ತೂರು ಮತ್ತು ರಾಧೇಶ್ ಶೆಣೈ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಕ್ಷತ್ ಅಮಿನ್, ಪ್ರಸನ್ನ ಪುತ್ತೂರು, ನಿತಿನ್ ಅಗರ್ವಾಲ್ ಮುಂತಾದ ಹೊಸಬರು ನಟಿಸಿದ್ದಾರೆ.
ನಾಯಕ ನಟಿ ಇಲ್ಲದೆ, ಯಾವುದೇ ಮೇಕಪ್ ಬಳಸದೆ, ಒಂದೇ ಸ್ಥಳದಲ್ಲಿ ಮತ್ತು ಒಂದೇ ವೇಳಾಪಟ್ಟಿಯಲ್ಲಿ ಚಿತ್ರೀಕರಿಸಲಾಗಿದೆ. ಹೋಟೆಲ್/ಲಾಡ್ಜ್ ರೂಮ್ ಬಾಯ್ ಒಬ್ಬನ ಮೇಲೆ ನಡೆಯುವ ಅನ್ಯಾಯದ ವಿರುದ್ಧದ ಸೇಡು ಮತ್ತು ಕಪ್ಪು ಹಣದ ಸುತ್ತ ಕಥೆ ಸಾಗುತ್ತದೆ.
ಪ್ರಥಮ ಪ್ರದರ್ಶನಗಳಲ್ಲಿ ಈ ಚಿತ್ರವು ಉತ್ತಮ ಅಭಿಪ್ರಾಯಗಳನ್ನು ಪಡೆದಿದ್ದು, ಕರಾವಳಿ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದೆ. ಹೊಸಬರ ಪ್ರಯತ್ನವಾಗಿದ್ದರೂ, ಕಥೆಯ ನೈಜತೆಯಿಂದಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
