-->
ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿನಂದಕ ಅಳವಡಿಸಿ: ಪೌರಾಯುಕ್ತ ಮಹಾಂತೇಶ್

ವಾಣಿಜ್ಯ ಮಳಿಗೆಗಳಲ್ಲಿ ಅಗ್ನಿನಂದಕ ಅಳವಡಿಸಿ: ಪೌರಾಯುಕ್ತ ಮಹಾಂತೇಶ್


ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ವಸತಿ ಸಮುಚ್ಛಯ ಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ಅಗ್ನಿನಂದಕ (Fire Hydrent)ವನ್ನು ಅಳಡಿಸಿಕೊಳ್ಳುವಂತೆ ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ್ ಸೂಚಿಸಿದ್ದಾರೆ. 

ಉಡುಪಿ ನಗರಸಭಾ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳು, ವಸತಿ ಸಮುಚ್ಚಯಗಳಲ್ಲಿ ಬೆಂಕಿ ಅನಾಹುತಗಳು ದಿನನಿತ್ಯ ಹೆಚ್ಚುತ್ತಿದ್ದು ಹಾಗೂ ಪ್ರಸ್ತುತ ನಗರದಲ್ಲಿ ತಾಪಮಾನವು ದಿನೇದಿನೇ ಹೆಚ್ಚಾಗುತ್ತಿದೆ. ಆದುದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು, ವಸತಿ ಸಮುಚ್ಚಯಗಳು, ಆಸ್ಪತ್ರೆಗಳು, ಕೈಗಾರಿಕೆಗಳು, ಗುಜರಿ ಅಂಗಡಿಗಳು ಇತ್ಯಾದಿ ಸ್ಥಳಗಳಲ್ಲಿ ಅಗ್ನಿ ಅವಘಡಗಳನ್ನು ತಡೆಗಟ್ಟಲು ಅಗ್ನಿನಂದಕ (Fire Hydrent)ವನ್ನು ಅಳಡಿಸಿಕೊಳ್ಳಬೇಕು.

ಅಲ್ಲದೇ ರಾಸಾಯನಿಕ ದ್ರವ್ಯಗಳು ಮತ್ತು ಇತರೆ ದ್ರವ್ಯ ಪ್ರದಾರ್ಥಗಳನ್ನು ಶೇಖರಣೆ ಮಾಡಿರುವಂತಹ ಗೋದಾಮುಗಳಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡು, ತಮ್ಮ ತಮ್ಮ ಮಳಿಗೆಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತರಬೇತಿಯನ್ನು ನೀಡಿ ನಗರದಲ್ಲಿ ಅಗ್ನಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವಂತೆ ಪೌರಾಯುಕ್ತರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

Ads on article

Advertise in articles 1

advertising articles 2

Advertise under the article