-->
ಕಳವಾದ ಚಿನ್ನದ ಸರ, ಪರ್ಸನ್ನು ಎರಡೇ ಗಂಟೆಯಲ್ಲಿ ಪತ್ತೆಹಚ್ಚಿದ ಕೊಲ್ಲೂರು ಪೊಲೀಸರು

ಕಳವಾದ ಚಿನ್ನದ ಸರ, ಪರ್ಸನ್ನು ಎರಡೇ ಗಂಟೆಯಲ್ಲಿ ಪತ್ತೆಹಚ್ಚಿದ ಕೊಲ್ಲೂರು ಪೊಲೀಸರು


ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕಳವಾದ ಚಿನ್ನದ ಸರ ಮತ್ತು ಹಣದ ಪರ್ಸ್‌ನ್ನು  ಎರಡೇ ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಕೊಲ್ಲೂರು ಠಾಣಾ ಪೊಲೀಸರು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ. 

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕೇರಳ ರಾಜ್ಯದ ಭಕ್ತರೊಬ್ಬರ ಪರ್ಸ್ ಕಳವಾಗಿತ್ತು. ಪರ್ಸ್ ನಲ್ಲಿ 2 ಚಿನ್ನದ ಸರ ಹಾಗೂ ಹಣವಿತ್ತು. ಅಲ್ಲಿನ ಸಿಸಿ ಟಿವಿ ಕ್ಯಾಮರಾ ಆಧಾರದಲ್ಲಿ ಪೊಲೀಸರು ಅದನ್ನು ಎರಡು ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ.  ಪಿಎಸ್ಸೆ ಭೀಮಾಶಂಕರ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. 

Ads on article

Advertise in articles 1

advertising articles 2

Advertise under the article