-->
 ಮೂಳೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ವಿರೋಧ: ಬೃಹತ್ ಪ್ರತಿಭಟನೆ(Video)

ಮೂಳೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ವಿರೋಧ: ಬೃಹತ್ ಪ್ರತಿಭಟನೆ(Video)


ಮೂಳೂರು ಗ್ರಾಮದಲ್ಲಿ ಕಾಪು ಪುರಸಭೆ ವತಿಯಿಂದ ನಿರ್ಮಿಸಲು ಹೊರಟಿರುವ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ವಿರೋಧಿಸಿ ಮೂಳೂರು ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.


ಪ್ರತಿಭಟನಾಸ್ಥಳಕ್ಕೆ ಆಗಮಿಸಿದ್ದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು, ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಪುರಸಭೆಗೆ ಕೊಳಚೆ ನೀರು ಶುದ್ಧೀಕರಣ ಘಟಕ (SಖಿP) ಅತ್ಯಗತ್ಯ. ಆದರೆ ಇದರಿಂದ ಸ್ಥಳೀಯರಿಗೆ ಸಮಸ್ಯೆ ಆಗಲಿದ್ದು ಸ್ಥಳೀಯರಿಂದ ವಿರೋಧ ಇರುವುದರಿಂದ ಪರಿಸರ ಸಂಭOದಿ ಇತರೆ ಸಮಸ್ಯೆ ಎದುರಾಗುವುದರಿಂದ ಇದಕ್ಕೆ ಪರ್ಯಾಯವಾಗಿ ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವAತೆ ಅಥವಾ ಬದಲಿ ಸ್ಥಳ ಗುರುತಿಸುವಂತೆ ಶಾಸಕರು ಸೂಚಿಸಿದರು.


ಮೂಳೂರು ಎಸ್.ಟಿ.ಪಿ ನಿರ್ಮಾಣ ವಿರೋಧ ಸಮಿತಿ ಅವರೊಂದಿಗೆ ಶಾಸಕ ಗುರ್ಮೆ ಅವರು, ಕಾಪು ತಹಶೀಲ್ದಾರರಾದ ಅನಂತ ಶಂಕರ್ ಹಾಗೂ ಕಾಪು ಪುರಸಭೆಯ ಮುಖ್ಯಾಧಿಕಾರಿಗಳಾದ ನೀಲಕಂಠ ಮೇಸ್ತಾ ಅವರಿಗೆ ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಮನವಿ ಸಲ್ಲಿಸಿದರು.





Ads on article

Advertise in articles 1

advertising articles 2

Advertise under the article