-->
ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ



ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬೆಂಗಳೂರಿನ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್​​ಚಂದ್​ ಗೆಹ್ಲೋಟ್​​ ನೂತನ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದ್ದು, ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರೇಷ್ಮೆ ಪಂಚೆ, ಜುಬ್ಬ, ಶಲ್ಯ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಶಿವಕುಮಾರ್​​ ಕಾಣಿಸಿಕೊಂಡಿರೋದು ಗಮನಸೆಳೆಯಿತು.

ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​​, ತೆಲಂಗಾಣ ಸಿಎಂ ರೇವಂತ್​​ ರೆಡ್ಡಿ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್​ ರೆಡ್ಡಿ ಕೇರಳಂ ಸಿಎಂ ಸತೀಶನ್​,  ಕಾಂಗ್ರೆಸ್ ನಾಯಕರಾದ ಹರಿಪ್ರಸಾದ್​, ಮೊಹಮ್ಮದ್ ಅಜರುದ್ದೀನ್, ರಾಜೀವ್ ಶುಕ್ಲಾ ಸೇರಿ ಪಕ್ಷದ ಪ್ರಮುಖ ನಾಯಕರು ಮತ್ತು ಜನಪ್ರತಿನಿಧಿಗಳು, ವಿವಿಧ ಮಠಾಧೀಶರು, ಮೌಲ್ವಿಗಳು, ಮತ್ತು ಚರ್ಚ್​​ಗಳ ಮುಖ್ಯಸ್ಥರು, ಸಿನಿ ತಾರೆಯರು ಸೇರಿ ಡಿಕೆಶಿ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಿಜೆಪಿಯ ಉಚ್ಛಾಟಿತ ಶಾಸಕರಾದ ಶಿವರಾಮ ಹೆಬ್ಬಾರ್​​ ಮತ್ತು ಎಸ್.ಟಿ.ಸೋಮಶೇಖರ್ ಕೂಡ ಈ ವೇಳೆ ಕಾಣಿಸಿಕೊಂಡಿದ್ದಾರೆ



Ads on article

Advertise in articles 1

advertising articles 2

Advertise under the article