-->
ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ದರ ಮತ್ತೆ ಏರಿಕೆ

ವಾಣಿಜ್ಯ ಬಳಕೆಯ ಎಲ್.ಪಿ.ಜಿ ಸಿಲಿಂಡರ್ ದರ ಮತ್ತೆ ಏರಿಕೆ


ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ದರ ಏರಿಕೆಯಿಂದ ತತ್ತರಿಸಿರುವ ದೇಶದ ಜನರಿಗೆ ಕೇಂದ್ರ ಸರ್ಕಾರವು ಬೆಳ್ಳಂಬೆಳಗ್ಗೆ ಶಾಕ್‌ ಕೊಟ್ಟಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಭಾರೀ ಏರಿಕೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ. 

ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್‌ ದರ 42 ರೂ. ಹೆಚ್ಚಾಗಿದ್ದು, ಪ್ರತಿ ಸಿಲಿಂಡರ್‌ ಬೆಲೆ 3,113.5 ರೂ.ಗಳಿಗೆ ತಲುಪಿದ್ದರೆ, ಬೆಂಗಳೂರಿನಲ್ಲಿ 46 ರೂ.ಗಳಷ್ಟು ಹೆಚ್ಚಳವಾಗಿ ಪ್ರತಿ ಸಿಲಿಂಡರ್ ದರ 3,198 ರೂ.ಗಳಿಗೆ ಏರಿಕೆಯಾಗಿದೆ.

ಕೋಲ್ಕತ್ತಾದಲ್ಲಿ 19 ಕೆಜಿ ಸಿಲಿಂಡರ್‌ ದರ 53.5 ರೂ. ಹೆಚ್ಚಾಗಿದ್ದು, 3,255.5 ರೂ. ತಲುಪಿದೆ. ಇದರೊಂದಿಗೆ 5 ಕೆಜಿ ಫ್ರೀ ಟ್ರೇಡ್ ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಬೆಲೆ 11 ರೂ. ಹೆಚ್ಚಿಸಿದ್ದು, ಪ್ರತಿ ಸಿಲಿಂಡರ್‌ ಬೆಲೆ 821.5 ರೂ.ಗಳಿಗೆ ತಲುಪಿದೆ.

ಕಳೆದ ಮೇ 1 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ 2ನೇ ಬಾರಿಗೆ ಮಾಡಿದ ಬೆಲೆ ಏರಿಕೆಯಾಗಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮೇ 1 ರಂದು ಏಕಾಏಕಿ ಪ್ರತಿ ವಾಣಿಜ್ಯ ಸಿಲಿಂಡರ್‌ ಮೇಲಿನ ಬೆಲೆಯನ್ನು 993 ರೂ.ಗಳಷ್ಟು ಹೆಚ್ಚಳ ಮಾಡಿತ್ತು. ಆದಾಗ್ಯೂ ತೈಲ ಕಂಪನಿಗಳು ಸಾಕಷ್ಟು ನಷ್ಟ ಅನುಭವಿಸುತ್ತಿರುವುದರಿಂದ ಬೆಲೆ ಏರಿಕೆಯು ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ.

Ads on article

Advertise in articles 1

advertising articles 2

Advertise under the article