ಉಡುಪಿ ಡಾ. ಎ.ವಿ ಬಾಳಿಗ ಆಸ್ಪತ್ರೆಯಲ್ಲಿ ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಕ್ರಮ
ಉಡುಪಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಹಾಗೂ ಕಮಲ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ವತಿಯಿಂದ One Good Step ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ನವಜೀವನ ಲೇ ಕೌನ್ಸಿಲರ್ ತರಬೇತಿ ಕಾರ್ಯಕ್ರಮದ 9ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ ಎ. ಬಾಳಿಗ ಸಭಾಂಗಣದಲ್ಲಿ ನೆರವೇರಿತು.
ಸಹಾಯ ಹಸ್ತ ಮಣಿಪಾಲ ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಕಾರ್ಯದರ್ಶಿ ಡಾ. ಎಚ್. ಗಣೇಶ್ ಪೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಅಗತ್ಯತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ತರಬೇತಿ ಪಡೆದ ಕೌನ್ಸಿಲರ್‌ಗಳ ಮಹತ್ವವನ್ನು ವಿವರಿಸಿ, ಈ ಕಾರ್ಯಕ್ರಮದ ಆಯೋಜಕರನ್ನು ಅಭಿನಂದಿಸಿದರು.
ಎ.ವಿ ಬಾಳಿಗ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಮನೋವೈದ್ಯ ಡಾ. ದೀಪಕ್ ಮಲ್ಯ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಪಸ್ಥಿತರಿದ್ದರು.ಉದ್ಘಾಟನಾ ಸಮಾರಂಭದ ಬಳಿಕ ತರಬೇತಿ ಕಾರ್ಯಕ್ರಮದ ಶೈಕ್ಷಣಿಕ ಅಧಿವೇಶನಗಳು ಆರಂಭಗೊಂಡವು. ಮೊದಲ ಅಧಿವೇಶನದಲ್ಲಿ ಡಾ. ಪಿ. ವಿ. ಭಂಡಾರಿ ಅವರು "ಮೆದುಳು ಮತ್ತು ಅದರ ಕಾರ್ಯಗಳು" ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಅವರು ಮೆದುಳಿನ ರಚನೆ, ವಿವಿಧ ಭಾಗಗಳ ಕಾರ್ಯವೈಖರಿ, ಭಾವನೆಗಳು, ಚಿಂತನೆ, ವರ್ತನೆ ಮತ್ತು ಮಾನಸಿಕ ಆರೋಗ್ಯದೊಂದಿಗೆ ಅದರ ಸಂಬಂಧವನ್ನು ವಿವರಿಸಿದರು.
ಎರಡನೇ ಅಧಿವೇಶನವನ್ನು ಸೌಜನ್ಯ ಶೆಟ್ಟಿ ನಡೆಸಿಕೊಟ್ಟರು. ಅವರು "ಕೌನ್ಸಿಲಿಂಗ್‌ನ ಮೂಲ ತತ್ವಗಳು" ಎಂಬ ವಿಷಯದ ಕುರಿತು ಮಾತನಾಡಿ, ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಅಗತ್ಯವಾದ ಅನುಭೂತಿ , ಸಕ್ರಿಯ ಆಲಿಸುವಿಕೆ , ಗೌಪ್ಯತೆ, ನಿರ್ಣಯರಹಿತ ಮನೋಭಾವ ಹಾಗೂ ಪರಿಣಾಮಕಾರಿ ಸಂವಹನ ಕೌಶಲ್ಯಗಳ ಕುರಿತು ವಿವರಿಸಿದರು.
ಈ ತರಬೇತಿ ಕಾರ್ಯಕ್ರಮವು ಸಮುದಾಯದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವ ಹಾಗೂ ಅಗತ್ಯವಿರುವವರಿಗೆ ಮೂಲಭೂತ ಸಮಾಲೋಚನಾ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದು, ಭಾಗವಹಿಸಿದ ತರಬೇತಿದಾರರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಶ್ವೇಶ್ವರ ಹೆಗಡೆ ಪ್ರಾರ್ಥಿಸಿದರು.
.jpeg)
.jpeg)