ಅತಿವೃಷ್ಟಿ–ಬರ ನಿರ್ವಹಣೆಗೆ ಸಚಿವರಿಗೆ ಜಿಲ್ಲಾವಾರು ಹೊಣೆಗಾರಿಕೆ: ತಕ್ಷಣ ವರದಿ ಸಲ್ಲಿಸಲು ಸಿಎಂ ಸೂಚನೆ
ರಾಜ್ಯದಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವರಿಗೆ ಜಿಲ್ಲಾವಾರು ಜವಾಬ್ದಾರಿಗಳನ್ನು ಹಂಚಿಕೆ ಮಾಡಿ, ತಕ್ಷಣ ಕಾರ್ಯಪ್ರವೃತ್ತರಾಗುವಂತೆ ನಿರ್ದೇಶನ ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿರುವ ಅತಿವೃಷ್ಟಿ ಮತ್ತು ಬರ ಪರಿಸ್ಥಿತಿಯ ವಾಸ್ತವ ಚಿತ್ರಣವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ತಮಗೆ ಹಂಚಿಕೆ ಮಾಡಲಾದ ಜಿಲ್ಲೆಗಳಿಗೆ ಕೂಡಲೇ ಭೇಟಿ ನೀಡಿ, ಪ್ರತಿಯೊಂದು ತಾಲೂಕಿನ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಪರಿಶೀಲನೆ ವೇಳೆ ಸ್ಥಳೀಯ ಸಮಸ್ಯೆಗಳು, ಪರಿಹಾರ ಕಾರ್ಯಗಳ ಪ್ರಗತಿ, ಜನರಿಗೆ ಅಗತ್ಯವಿರುವ ನೆರವು ಸೇರಿದಂತೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಸಮಗ್ರ ವರದಿ ಸಿದ್ಧಪಡಿಸಬೇಕು. ನಂತರ ವಾಸ್ತವ ಸ್ಥಿತಿಯ ವರದಿಯನ್ನು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ತಕ್ಷಣ ಸಲ್ಲಿಸುವಂತೆ ಸೂಚಿಸಲಾಗಿದೆ.
ಜನರಿಗೆ ಯಾವುದೇ ತೊಂದರೆ ಉಂಟಾಗದಂತೆ ಪರಿಹಾರ ಕಾರ್ಯಗಳನ್ನು ವೇಗಗೊಳಿಸಲು ಜಿಲ್ಲಾಡಳಿತಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಚಿವರಿಗೆ ನಿರ್ದೇಶನ ನೀಡಿದ್ದಾರೆ.
ಸಚಿವರಿಗೆ ಹಂಚಿಕೆ ಮಾಡಲಾದ ಜಿಲ್ಲೆಗಳು:
ಡಾ. ಜಿ. ಪರಮೇಶ್ವರ – ತುಮಕೂರು
ರಘುಮೂರ್ತಿ – ಚಿತ್ರದುರ್ಗ
ಬಿ.ಎಸ್. ಸುರೇಶ್ (ಬೈರತಿ) – ಚಿಕ್ಕಬಳ್ಳಾಪುರ
ಕೆ.ಎಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾರೆಡ್ಡಿ – ಕೋಲಾರ
ಹೆಚ್.ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ
ಬಿ.ಝೆಡ್. ಜಮೀರ್ ಅಹಮ್ಮದ್ ಖಾನ್ – ವಿಜಯನಗರ
ಕೆ.ಜೆ. ಜಾರ್ಜ್ – ಚಿಕ್ಕಮಗಳೂರು
ಕೆ.ಎಂ. ಶಿವಲಿಂಗೇಗೌಡ – ಹಾಸನ
ಮಧು ಬಂಗಾರಪ್ಪ – ಶಿವಮೊಗ್ಗ
ಎಂ.ಬಿ. ಪಾಟೀಲ್ – ವಿಜಯಪುರ
ವಿಜಯಾನಂದ ಕಾಶಪ್ಪನವರ್ – ಬಾಗಲಕೋಟೆ
ಬಸವರಾಜ ರಾಯರೆಡ್ಡಿ – ಗದಗ
ಎಸ್.ಎಸ್. ಮಲ್ಲಿಕಾರ್ಜುನ – ದಾವಣಗೆರೆ
ರುದ್ರಪ್ಪ ಲಮಾಣಿ – ಹಾವೇರಿ
ಸತೀಶ್ ಜಾರಕಿಹೊಳಿ – ಬೆಳಗಾವಿ
ಸಂತೋಷ್ ಲಾಡ್ – ಧಾರವಾಡ
ಲಕ್ಷ್ಮಣ ಸವದಿ – ಉತ್ತರ ಕನ್ನಡ
ಪ್ರಿಯಾಂಕ್ ಖರ್ಗೆ – ಕಲಬುರಗಿ
ಅಜಯ್ ಧರಂ ಸಿಂಗ್ – ರಾಯಚೂರು
ಈಶ್ವರ್ ಖಂಡ್ರೆ – ಬೀದರ್
ಯು.ಟಿ. ಖಾದರ್ – ದಕ್ಷಿಣ ಕನ್ನಡ ಹಾಗೂ ಉಡುಪಿ
ಪಿ.ಎಂ. ನರೇಂದ್ರಸ್ವಾಮಿ – ಕೊಡಗು
ಯತೀಂದ್ರ ಸಿದ್ಧರಾಮಯ್ಯ – ಮೈಸೂರು
ಚೆಲುವರಾಯಸ್ವಾಮಿ – ಮಂಡ್ಯ
ಪುಟ್ಟರಂಗಶೆಟ್ಟಿ – ಚಾಮರಾಜನಗರ
ಬಿ. ನಾಗೇಂದ್ರ – ಬಳ್ಳಾರಿ
ಶರಣ ಪ್ರಕಾಶ್ ಪಾಟೀಲ – ಯಾದಗಿರಿ
ಶಿವರಾಜ್ ಸಂಗಪ್ಪ ತಂಗಡಗಿ – ಕೊಪ್ಪಳ
ಕೃಷ್ಣ ಬೈರೇಗೌಡ – ಬೆಂಗಳೂರು ನಗರ.