ಕೃಷ್ಣಾಷ್ಟಮಿ ಪ್ರಯುಕ್ತ ಗೀತಾ ಮಂದಿರದಲ್ಲಿ 108 ವಿಧದ ಲಡ್ಡುಗಳ ವಿಶೇಷ ತಯಾರಿ
Thursday, September 03, 2026
ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಉಡುಪಿಯ ಗೀತಾ ಮಂದಿರದಲ್ಲಿ 108 ವಿಧದ ಲಡ್ಡುಗಳನ್ನು ಭಕ್ತರಿಗೆ ಒದಗಿಸಲಾಗುತ್ತಿದೆ.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಶ್ರೀಕೃಷ್ಣ ಜಯಂತಿ ಆಚರಣೆಯ ಅಂಗವಾಗಿ ಈ ವಿಶೇಷ ಲಡ್ಡುಗಳನ್ನು ಸಿದ್ಧಪಡಿಸಲಾಗಿದೆ. ವಿವಿಧ ಬಗೆಯ 108 ವಿಧದ ಲಡ್ಡುಗಳು ಭಕ್ತರ ಗಮನ ಸೆಳೆಯುತ್ತಿದ್ದು, ಆಸಕ್ತ ಭಕ್ತರಿಗೆ ಇಂದಿನಿಂದಲೇ ಲಡ್ಡುಗಳು ಲಭ್ಯವಾಗಲಿವೆ.
ಲಡ್ಡುಗಳ ವೀಕ್ಷಣೆಗೆ ಸಹ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು ಗೀತಾ ಮಂದಿರಕ್ಕೆ ಭೇಟಿ ನೀಡಿ ವಿವಿಧ ಬಗೆಯ ಲಡ್ಡುಗಳನ್ನು ವೀಕ್ಷಿಸಬಹುದಾಗಿದೆ. ಲಡ್ಡುಗಳನ್ನು ಮುಂಗಡವಾಗಿ ಕಾದಿರಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ 8792158946 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಶ್ರೀ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.