ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಸ್ಕತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ್ ಶೆಟ್ಟಿ ತೆಕ್ಕಟ್ಟೆ, ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕು ಮೊಡಂಕಾಪುವಿನ ಕಾರ್ಮೆಲ್ ಹೈಸ್ಕೂಲ್ ನ ಶಿಕ್ಷಕ ರೋಷನ್ ಅಲೆಕ್ಸಾಂಡರ್ ಪಿಂಟೊ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಶೋಕ್ ತೆಕ್ಕಟ್ಟೆ ಅವರು ಕಲಾವಿದರಾಗಿ, ತರಬೇತುದಾರರಾಗಿ, ಸಂಘಟಕರಾಗಿ ಬಹುಮುಖ ಪ್ರತಿಭೆಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ.