ಉಡುಪಿ: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ
Friday, September 04, 2026
ಉಡುಪಿ ಜಿಲ್ಲೆಯ 16 ಮಂದಿ ಶಿಕ್ಷಕರು ಈ ಬಾರಿಯ (2026) ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಗಣೇಶ್, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಲಿಮಕ್ಕಿ, ರವಿ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆಲಡ್ಕ, ಬ್ರಹ್ಮಾವರ, ಉಷಾಕುಮಾರಿ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಲ್ಲಾಡಿ ಮೂರು ಕೈ, ಕುಂದಾಪುರ, ಸುವಾಸಿನಿ, ಸಹ ಶಿಕ್ಷಕರು, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ವಳಕಾಡು, ಉಡುಪಿ, ಲೀಲಾವತಿನಾಯ್ಯ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಟಿ.ರೋಡ್, ಕುಂದಾಪುರ, ಶ್ರೀಕಾಂತ್‌ಭಟ್, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಮ್ಮಾಡಿ, ಕಾರ್ಕಳ, ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಂಜುಳ ಜಯಕರ್, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 52ನೇ ಹೇರೂರು, ಬ್ರಹ್ಮಾವರ, ಶೈಲಜಾಶೆಟ್ಟಿ, ಪ್ರಭಾರ ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೂಜಾಡಿ–2, ಕುಂದಾಪುರ, ವೀಣಾ ಆರ್, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಯಾ, ಕಾರ್ಕಳ, ಪಾರ್ವತಿ ಎಂ., ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಜಾಡಿ–ಪಡು, ಕುಂದಾಪುರ, ಸತೀಶ್ಚಂದ್ರ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಡು–ಅಲೆವೂರು, ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಕೃಷ್ಣಶೆಟ್ಟಿ, ಸಹ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಕೊಕ್ಕರ್ಣೆ, ಬ್ರಹ್ಮಾವರ, ರವಿರಾಜ್‌ಶೆಟ್ಟಿ, ಸಹ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ವಂಡ್ಸೆ, ಬೈಂದೂರು, ಆರ್. ನಾರಾಯಣಶೆಟ್ಟಿ, ಮುಖ್ಯ ಶಿಕ್ಷಕರು, ಶ್ರೀಮದ್ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ, ಶಾಂತಪ್ಪ ಮೂಲಂಗಿ, ಪ್ರಭಾರ ಮುಖ್ಯ ಶಿಕ್ಷಕರು, ಯು.ಎಸ್. ನಾಯಕ್ ಪ್ರೌಢಶಾಲೆ, ಪಟ್ಲ, ಉಡುಪಿ, ಪಿಯೂಷ್ ಡಿ’ಸೋಜಾ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬಸ್ರೂರು, ಕುಂದಾಪುರ ಇವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶನಿವಾರ ಬೆಳಿಗ್ಗೆ ಬ್ರಹ್ಮಾವರದ ಶ್ಯಾಮಿಲಿ ಶನಾಯ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುವುದು.