ಅ.17: ಕಡಿಯಾಳಿಯಲ್ಲಿ 9ನೇ ವರ್ಷದ ‘ಉಡುಪಿ ದಾಂಡಿಯಾ 2026’ ಸಂಭ್ರಮ
Monday, October 12, 2026
ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ) ಕಡಿಯಾಳಿ ಇದರ ಯುವ ಘಟಕದ ನೇತೃತ್ವದಲ್ಲಿ 9ನೇ ವರ್ಷದ "ಉಡುಪಿ ದಾಂಡಿಯಾ 2026" ಕಾರ್ಯಕ್ರಮವು ಅಕ್ಟೋಬರ್ 17 ಶನಿವಾರ ಸಾಯಂಕಾಲ 6 ಗಂಟೆಯಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ ಎಂದು ಯವ ಘಟಕ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತ್ಯುತ್ತಮ ಜೋಡಿ ನೃತ್ಯ, ಅತ್ಯುತ್ತಮ ವೇಷಭೂಷಣ, ಅತ್ಯುತ್ತಮ ಸಮೂಹ ನೃತ್ಯ, ಒಂದರಿಂದ ಹತ್ತು ವರ್ಷದೊಳಗಿನ ಮಕ್ಕಳ ಅತ್ಯುತ್ತಮ ವೇಷಭೂಷಣ ಸ್ಪರ್ಧೆ ನಡೆಯಲಿದೆ. ಮತ್ತು ಈ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಯಾಗಿ ಅತ್ಯುತ್ತಮ ನವವಿವಾಹಿತ ಜೋಡಿ ನೃತ್ಯಕ್ಕೆ ವಿಶೇಷ ಬಹುಮಾನವಿದೆ. 17ಅಕ್ಟೋಬರ್ 2026 ವೇಳೆಗೆ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸದ ದಂಪತಿಗಳಿಗೆ ಮಾತ್ರ ಈ ವಿಭಾಗದಲ್ಲಿ ಅವಕಾಶ ಇದೆ. ಈ ಕಾರ್ಯಕ್ರಮದಲ್ಲಿ 2025ರಲ್ಲಿ ವಿಶ್ವ ಚಾಂಪಿಯನ್ ಭಾರತದ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ ಧನಲಕ್ಷ್ಮೀ ಪೂಜಾರಿ, ಕನ್ನಡ ಚಲನಚಿತ್ರದ ಅಭಿನಯಕ್ಕಾಗಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ,ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಭರತನಾಟ್ಯದಲ್ಲಿ ವಿಶ್ವ ದಾಖಲೆ ಮಾಡಿದ್ದ ವಿದುಷಿ ದೀಕ್ಷಾರೊಂದಿಗೆ ಹಲವಾರು ತುಳು ಚಲನಚಿತ್ರ ನಟರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಮೈದಾನದಲ್ಲಿ ವಿಶಿಷ್ಟ ರೀತಿಯ ಅಲಂಕಾರ ಗೊಳ್ಳಲಿದ್ದು, ಆಹಾರ ಮಳಿಗೆ, ಮತ್ತು ಎಂದು ವಿಶೇಷ ಸುಡು ಮದ್ದು ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮಕ್ಕೆ ಮತ್ತು ನೃತ್ಯಕ್ಕೆ ಆಗಮಿಸುವ ಎಲ್ಲರಿಗೂ ಉಚಿತ ಪ್ರವೇಶವಿದೆ.
ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷರಾದ ಅಶ್ವತ್ ದೇವಾಡಿಗ ಕಡಿಯಾಳಿ, ಪ್ರಧಾನ ಕಾರ್ಯದರ್ಶಿ ಶ್ರೇಯಸ್ ದೇವಾಡಿಗ ಕಡಿಯಾಳಿ, ಕೋಶಾಧಿಕಾರಿ ವಿಘ್ನೇಶ್ ಪ್ರಭು ಮತ್ತು ವಿವೇಕ್ ಕಾಮತ್ ಉಪಸ್ತಿತರಿದ್ದರು.
