-->
ಮಣಿಪಾಲದಲ್ಲಿ ಅಖಿಲ ಭಾರತ ಮುಕ್ತ FIDE ರೇಟೆಡ್ ಚೆಸ್ ಪಂದ್ಯಾವಳಿ

ಮಣಿಪಾಲದಲ್ಲಿ ಅಖಿಲ ಭಾರತ ಮುಕ್ತ FIDE ರೇಟೆಡ್ ಚೆಸ್ ಪಂದ್ಯಾವಳಿ


ಲಯನ್ಸ್ ಕ್ಲಬ್ ಮಣಿಪಾಲ್, ಕಲ್ಲ್ಯಾ ದೇವರಾಯ ಶೆಣೈ ಚೆಸ್ ಫೌಂಡೇಶನ್ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ನ ಸಂಯುಕ್ತ ಆಶ್ರಯದಲ್ಲಿ 18ನೇ ಲಯನ್ ಕಲ್ಲ್ಯಾ ದೇವರಾಯ ಶೆಣೈ ಸ್ಮಾರಕ ಚೆಸ್ ಪಂದ್ಯಾವಳಿ ಹಾಗೂ 2ನೇ UDCA ಟ್ರೋಫಿ ಅಂಗವಾಗಿ ಅಖಿಲ ಭಾರತ ಮುಕ್ತ FIDE ರೇಟೆಡ್ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು  ಮಣಿಪಾಲದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ದೇಶದ ವಿವಿಧ ಭಾಗಗಳಿಂದ ಆಗಮಿಸಿದ 400ಕ್ಕೂ ಅಧಿಕ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. PMJF ಲಯನ್ ವಿ. ಪ್ರಸಾದ್ ಶೆಟ್ಟಿ ಹಾಗೂ ವಲಯ ಅಧ್ಯಕ್ಷ  ಡಾ. ನಿಶಾಂತ್ ಭಟ್ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಪಂದ್ಯಾವಳಿಯಲ್ಲಿ ಚಿರಂತ್ ಎಂ.ಡಿ. ಅವರು ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ವಿಹಾನ್ ಶೆಟ್ಟಿ ದ್ವಿತೀಯ ಹಾಗೂ ವಿಹಾನ್ ಲೋಬೊ ತೃತೀಯ ಸ್ಥಾನ ಪಡೆದರು. ವಿವಿಧ ವಯೋಮಾನದ ವಿಭಾಗಗಳಲ್ಲಿ 70ಕ್ಕೂ ಅಧಿಕ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ MJF ಲಯನ್ ರಾಜೀವ್ ಕೋಟ್ಯಾನ್, ಚೆಸ್ ಆಟವು ಯುವಜನರಲ್ಲಿ ಏಕಾಗ್ರತೆ, ತಾಳ್ಮೆ ಹಾಗೂ ತಾರ್ಕಿಕ ಚಿಂತನೆಯನ್ನು ಬೆಳೆಸುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಕಾರ್ಯತಂತ್ರ ರೂಪಿಸುವ ಕೌಶಲ್ಯ ಮತ್ತು ಸೂಕ್ತ ನಿರ್ಧಾರ ಕೈಗೊಳ್ಳುವ ಗುಣವನ್ನು ವೃದ್ಧಿಸುತ್ತದೆ. ಇದರೊಂದಿಗೆ ಶಿಸ್ತು, ಕ್ರೀಡಾಸ್ಫೂರ್ತಿ ಹಾಗೂ ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮನೋಬಲವನ್ನೂ ಬೆಳೆಸುತ್ತದೆ ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ಡಾ. ಸುಲತಾ ಭಂಡಾರಿ ಅವರು, ಬೃಹತ್ ಮಟ್ಟದಲ್ಲಿ ಚೆಸ್ ಪಂದ್ಯಾವಳಿಯನ್ನು ಆಯೋಜಿಸಿದ ಡಾ. ರಾಜಗೋಪಾಲ್ ಶೆಣೈ ಹಾಗೂ ಡಾ. ಎಚ್. ಗಣೇಶ್ ಪೈ ಅವರನ್ನು ಅಭಿನಂದಿಸಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಿಗಳು ಹಾಗೂ ವಿಜೇತರಿಗೆ ಶುಭ ಹಾರೈಸಿದರು.

ಡಾ. ಪ್ರಕಾಶ್ ಶೆಣೈ ಹಾಗೂ ಡಾ. ಸುರೇಶ್ ಶೆಣೈ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಸತೀಶ್ ಅವರು ಲಯನ್ಸ್ ಕ್ಲಬ್ ಮಣಿಪಾಲ್‌ನ ಪದಾಧಿಕಾರಿಗಳನ್ನು ಸನ್ಮಾನಿಸಿದರು.

Ads on article

Advertise in articles 1

advertising articles 2

Advertise under the article