
Bangalore: ಬೇಕರಿ, ಸಣ್ಣ ಅಂಗಡಿ ಮಾಲೀಕರಿಗೆ ಜಿಎಸ್‌ಟಿ ನೋಟೀಸ್: ಜು.25ರಂದು ಪ್ರತಿಭಟನೆಗೆ ಸಿದ್ದತೆ
18/07/2025 11:56 AM
ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ಬೇಕರಿ, ಕಾಂಡಿಮೆ0ಟ್ಸ್, ಟೀ-ಕಾಫಿ ಅಂಗಡಿಗಳು, ತರಕಾರಿ ವ್ಯಾಪಾರಿಗಳು ಸೇರಿದಂತೆ ಸಣ್ಣ ವ್ಯಾಪಾರಿಗಳಿಗೆ ಲಕ್ಷಾಂತರ ಹಾಗೂ ಕೋಟ್ಯಂತರ ರೂಪಾಯಿಗಳ ತೆರಿಗೆ ಪಾವತಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿರುವುದು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನೋಟಿಸ್‌ಗಳ ವಿರುದ್ಧ ವರ್ತಕರು ಒಗ್ಗೂಡಿ, ಜುಲೈ 25ರಂದು ರಾಜ್ಯಾದ್ಯಂತ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.ಜುಲೈ- 21 ರೊಳಗೆ ಟ್ಯಾಕ್ಸ್ ಹಣವನ್ನು ಕಟ್ಟಬೇಕು. ಇಲ್ಲದಿದ್ರೆ ಬ್ಯಾಂಕ್ ಅಕೌಂಟ್ ಸೀಜ್ ಮತ್ತು ಅಂಗಡಿ ಕ್ಲೋಸ್ ಮಾಡಲಾಗುವುದು ಎಂದು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ನೋಟಿಸ್ ಜಾರಿಯಾಗುತ್ತಿದ್ದಂತೆ ರಾಜ್ಯದ ಎಲ್ಲಾ ಕಾಂಡಿಮೆ0ಟ್ಸ್ ಮಾಲೀಕರು ಸಭೆ ಮಾಡಿ, ಒಗ್ಗೂಡಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆ ಕಾಂಡಿಮೆ0ಟ್ಸ್ ಮಾಲೀಕರು ಸಭೆ ನಡೆಸಿದ್ದು, ಜುಲೈ 24ರ ವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ. ಅಷ್ಟರೊಳಗೆ ಕಾಂಡಿಮೆ0ಟ್ಸ್ ಮಾಲೀಕರಿಗೆ ನೀಡಿರುವ ನೋಟಿಸ್ ವಾಪಸ್ಸು ಪಡೆಯಬೇಕು, ಇಲ್ಲಾಂದ್ರೆ ಜುಲೈ- 25 ರಂದು ಎಲ್ಲಾ ಕಾಂಡಿಮೆ0ಟ್ಸ್, ಟೀ ಕಾಫಿ ಶಾಪ್ ಕ್ಲೋಸ್ ಮಾಡುವುದಾಗಿ ಹೇಳಿದೆ.
ಇನ್ನು ಜುಲೈ- 23, 24 ರಂದು ಬೇಕರಿ, ಕಾಂಡಿಮೆ0ಟ್ಸ್ ಸೇರಿದಂತೆ ಶಾಪ್ ಗಳಲ್ಲಿ ಹಾಲಿನ ಉತ್ಪನ್ನಗಳ ಮಾರಾಟವನ್ನೂ ಬಂದ್ ಮಾಡುವುದಾಗಿ ಹೇಳಲಾಗಿದೆ. ಬೆಂಗಳೂರಿನಲ್ಲಿ 66 ಸಾವಿರ ಕಾಂಡಿಮೆ0ಟ್ಸ್ , ಬೇಕರಿಗಳಿವೆ. ಆದ್ರೆ ಟ್ಯಾಕ್ಸ್ ನೋಟಿಸ್ ಹಿನ್ನೆಲೆ ಜುಲೈ 25 ರಂದು ಶಾಪ್ ಗಳು ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.