Bangalore:  ನಂದಿನಿ ಹಾಲಿನ ಪ್ಯಾಕೇಟ್‌ಗೆ ಹೊಸ ರೂಪ;ಪರಿಸರಸ್ನೇಹಿ ಟಚ್

Bangalore: ನಂದಿನಿ ಹಾಲಿನ ಪ್ಯಾಕೇಟ್‌ಗೆ ಹೊಸ ರೂಪ;ಪರಿಸರಸ್ನೇಹಿ ಟಚ್


ನಂದಿನಿ ಹಾಲಿನ ಪ್ಯಾಕೆಟ್‌ಗೆ ಇನ್ಮುಂದೆ ಹೊಸ ರೂಪ ನೀಡಲು ಕೆಎಂಎಫ್ ಮುಂದಾಗಿದೆ. ಈಗ ಪಾಲಿಥಿನ್ ಕವರ್‌ನಲ್ಲಿ ಪ್ಯಾಕ್ ಆಗಿ ಹೊರಬರುತ್ತಿರುವ ನಂದಿನಿ ಹಾಲಿಗೆ ಇದೀಗ ಪರಿಸರ ಸ್ನೇಹಿ ಟಚ್ ಕೊಡಲು ಬೆಂಗಳೂರು ಹಾಲು ಒಕ್ಕೂಟ ಮುಂದಾಗಿದೆ. ಹೌದು ಇನ್ಮುಂದೆ ಪಾಲಿಥಿನ್ ಪ್ಯಾಕೆಟ್‌ಗಳ ಬದಲಾಗಿ ಜೈವಿಕ ಅಂಶಗಳಾಗಿ ವಿಘಟನೆಯಾಗಬಲ್ಲ ಪ್ಯಾಕೆಟ್‌ನಲ್ಲಿ ನಂದಿನಿ ಹಾಲು ಬರಲಿದೆ.


 ಪ್ರಾಯೋಗಿಕವಾಗಿ ಇದೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮಾತ್ರ ಹೊಸ ರೂಪದೊಂದಿಗೆ ನಂದಿನಿ ಹಾಲಿನ ಪ್ಯಾಕೆಟ್ ಬಿಡುಗಡೆಯಾಗಲಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಪ್ಲಾಸ್ಟಿಕ್ ನಿಷೇಧ ಮಾಡಿದ್ದರೂ ಸಹ ಹಾಲು ಪೂರೈಕೆಯಲ್ಲಿ ಬಳಸಲಾಗುವ ಪಾಲಿಥಿನ್ ಕವರ್‌ಗಳನ್ನು ನಿಷೇಧ ಮಾಡಿರಲಿಲ್ಲ. ಕಾರಣ ಪ್ರತಿದಿನ ಮುಂಜಾನೆ ಪ್ರತಿ ಮನೆಗೆ ನಂದಿನಿ ಹಾಲನ್ನು ಪೂರೈಕೆ ಮಾಡಲು ಪಾಲಿಥಿನ್ ಪ್ಯಾಕೆಟ್ ಬದಲಿಗೆ ಪರ್ಯಾಯ ವಸ್ತು ಇರಲಿಲ್ಲ. ಇದೀಗ ಪರಿಸರ ಸ್ನೆಹಿ ಬಯೋಡಿಗ್ರೆಡಬಲ್ ಪ್ಯಾಕೆಟ್ ದೊರೆತ್ತಿದ್ದು, ಇದರಲ್ಲೇ ಹಾಲು ತುಂಬಿ ಮಾರಾಟ ಮಾಡಲು ಕೆಎಂಎಫ್ ಮುಂದಾಗಿದೆ. ಮೆಕ್ಕೆಜೋಳ ಹಾಗೂ ಕಬ್ಬಿನಿಂದ ಈ ಪ್ಯಾಕೇಟ್‌ಗಳು ತಯಾರಾಗುವುದರಿಂದ ಕೇವಲ 90 ದಿನಗಳಲ್ಲೇ ಮಣ್ಣಿನಲ್ಲಿ ಕರಗುತ್ತವೆ. ಸದ್ಯ ಕನಕಪುರದ ಶಿವನಹಳ್ಳಿಯಲ್ಲಿ ಬಯೋಡಿಗ್ರೇಡೇಬಲ್ ಪ್ಯಾಕೇಜಿಂಗ್ ಕವರ್ ತಯಾರಿಕೆ ಪ್ರಯೋಗ ನಡೆಸಲು ಬಮೂಲ್ ನೂತನ ಅಧ್ಯಕ್ಷ ಡಿ.ಕೆ.ಸುರೇಶ್ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಇದೇ ಮಾದರಿಯಲ್ಲಿ ಹಾಲು ಪೂರೈಕೆ ಮಾಡುವ ಯೋಜನೆ ಪ್ರಸ್ತಾಪಿಸಿದ್ದಾರೆ. 


ವಿದೇಶಗಳಲ್ಲಿ ಮಾತ್ರ ಬಳಕೆಯಲ್ಲಿರುವ ಈ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ. ಸದ್ಯ ಈ ಯೋಜನೆ ಜಾರಿಯಾದರೆ ಪರಿಸರಸ್ನೇಹಿ ಹಾಲಿನ ಪ್ಯಾಕೆಟ್‌ಗಳು ಗ್ರಾಹಕರ ಮನೆ ಸೇರಲಿವೆ. ನೂತನ ತಂತ್ರಜ್ಞಾನದಡಿ ತಯಾರಿಸಲಾಗುವ ಬಯೋಡಿಗ್ರೇಡೇಬಲ್ ಪ್ಯಾಕೇಟ್‌ಗಳು ಕೇವಲ 6 ತಿಂಗಳಲ್ಲಿ ಮಣ್ಣಿನಲ್ಲಿ ಕರಗುವ ಸಾಮರ್ಥ್ಯ ಹೊಂದಿದ್ದು, ಒಂದು ವೇಳೆ ನಂದಿನಿ ಹಾಲಿನ ಪ್ಯಾಕಿಂಗ್ ಇದರಲ್ಲೇ ಆದರೆ, ಪರಿಸರ ಸಂರಕ್ಷಣೆಗೆ ಉತ್ತಮ ಕೊಡುಗೆಯಾಗಲಿದೆ. ಅಲ್ಲದೇ ಮೆಕ್ಕೆಜೋಳದಿಂದ ಈ ಪ್ಯಾಕೇಟ್‌ಗಳು ತಯಾರಾಗುವುದರಿಂದ ರೈತರು ಇದನ್ನು ಗೊಬ್ಬರದ ರೂಪದಲ್ಲಿ ಬಳಸಲೂ ಸಹಾಯವಾಗಲಿದೆ. ಸದ್ಯ ಬಮೂಲ್ ನಿತ್ಯ 14 ಲಕ್ಷ ಲೀಟರ್ ಹಾಲು ಹಾಗೂ ಮೊಸರು ಮಾರಾಟ ಮಾಡುತ್ತಿದೆ. ಇದೀಗ ನಿತ್ಯ ಸುಮಾರು 20 ಲಕ್ಷ ಪ್ಯಾಕೆಟ್‌ಗಳ ಬಳಕೆಯಾಗುತ್ತಿದ್ದು, ಈಗ ಬಯೋಡಿಗ್ರೇಡೆಬಲ್ ಪ್ಯಾಕೆಟ್ ಅಳವಡಿಕೆಯಾದ್ರೆ ಪರಿಸರಕ್ಕೆ ಜೊತೆಗೆ ಗ್ರಾಹಕರ ಆರೋಗ್ಯಕ್ಕೂ ಉತ್ತಮ ಎಂದು ಬಮೂಲ್ ಹೇಳಿದೆ. ಈ ಹೊಸ ಯೋಜನೆಗೆ ಬಮೂಲ್ ನೂತನ ಅಧ್ಯಕ್ಷರು ಒಲವು ತೋರಿದ್ದಾರೆ ಎಂದು ತಿಳಿದು ಬಂದಿದೆ.


Ads on article

Advertise in articles 1

advertising articles 2

Advertise under the article