Kalladka: ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ; ಸವಾರರಿಬ್ಬರಿಗೆ ಗಂಭೀರ ಗಾಯ
29/07/2025
ಬ್ಯಾರಿಕೇಡ್‌ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ಮಂಗಳೂರು- ಬೆಂಗಳೂರು ರಾಷ್ಟಿçÃಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ.
ತುಂಬೆ ನಿವಾಸಿ ಅಜಿತ್ ಹಾಗೂ ಸಹ ಸವಾರರೊಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುದ್ರೆಬೆಟ್ಟು ಎಂಬಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ನೀರು ತುಂಬಿ ಅಪಘಾತಗಳು ಹೆಚ್ಚಾಗುತ್ತಿತ್ತು, ಇದರ ದುರಸ್ಥಿ ಕಾರ್ಯಕ್ಕಾಗಿ ಡಿವೈಡರ್ ಅಗೆದು, ವಾಹನಗಳ ತಡೆಗಾಗಿ ಬ್ಯಾರಿಕೇಡ್‌ನ್ನು ಇಡಲಾಗಿತ್ತು.
ರಾತ್ರಿವೇಳೆ ಸೂಚನಾ ಫಲಕ ಕಾಣಿಸದೇ ಬೈಕ್ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.