
Udupi: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಕಾಪು ಮಾರಿಗುಡಿಗೆ ಭೇಟಿ
01/08/2025
ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ಉಡುಪಿ ಹೊಸ ಮಾರಿಗುಡಿಗೆ ಭೇಟಿ ನೀಡಿದರು.
ಈ ವೇಳೆ ಮಾರಿಯಮ್ಮನ ಅನುಗ್ರಹ ಪ್ರಸಾದ ನೀಡಿ ಅವರನ್ನು ಗೌರವಿಸಲಾಯಿತು. ನವದುರ್ಗ ಲೇಖನ ಯಜ್ಞ ಪುಸ್ತಕವನ್ನು ಪಡೆದುಕೊಂಡ ರೋಹಿಣಿ ನವದುರ್ಗ ಲೇಖನ ಯಜ್ಞ ಸಂಕಲ್ಪ ಸ್ವೀಕರಿಸಿದರು. ಶನಿವಾರ ಅವರು ಕೊಲ್ಲೂರಿನಲ್ಲಿ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ತಿಳಿದು ಬಂದಿದೆ.