Kaup: ಕೇಂದ್ರ ಸರ್ಕಾರದ ವಿರುದ್ಧ ಧರಣಿ
12/07/2025 07:42 AM
ಬಿಜೆಪಿಯ ಸುಳ್ಳು ಆರೋಪ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಪು ಮಜೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಮಜೂರು ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಕಾಪು ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ವೈ ಸುಕುಮಾರ್, ಮುಖಂಡರಾದ ನಿಯಾಜ್ ಪಡುಬಿದ್ರಿ, ನಾಗಭೂಷಣ್ ಭಟ್, ಶರಾಫುದ್ದಿನ್ ಶೇಖ್, ಅಬ್ದುಲ ಮಜೂರು, ವಿಜಯ್ ಧೀರಜ್, ಭಾಸ್ಕರ್ ಕರಂದಡಿ, ಸುಲಕ್ಷಣ ಪೂಜಾರಿ, ಕಾರ್ತಿಕ್ ಮಜೂರು ಮತ್ತು ಇತರ ಮುಖಂಡರು ಉಪಸ್ಥಿತರಿದ್ದರು.