MRPL ಘಟಕದಲ್ಲಿ ಗ್ಯಾಸ್ ಸೋರಿಕೆ- ಇಬ್ಬರು ಸಾವು, ಓರ್ವ ಗಂಭೀರ

MRPL ಘಟಕದಲ್ಲಿ ಗ್ಯಾಸ್ ಸೋರಿಕೆ- ಇಬ್ಬರು ಸಾವು, ಓರ್ವ ಗಂಭೀರ


ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನ ಗ್ಯಾಸ್ ಉತ್ಪಾದನಾ ಘಟಕದಲ್ಲಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಕಾರ್ಮಿಕರು  ಮೃತಪಟ್ಟ ಘಟನೆ ಜುಲೈ 12ರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಂಭವಿಸಿದೆ. ಮೃತಪಟ್ಟವರನ್ನು ತಾಂತ್ರಿಕ ಸಹಾಯಕರಾದ ದೀಪ್ ಚಂದ್ರ ಭಾರತಿಯಾ ಮತ್ತು ಬಿಜಿಲ್ ಪ್ರಸಾದ್ ಎಂದು ಗುರುತಿಸಲಾಗಿದೆ.  ತೊಟ್ಟಿಯ (ಟ್ಯಾಂಕ್ ಎಫ್‌ಬಿ 7029 ಎ - ಡ್ರೈ ಸ್ಲಾಪ್ ರ‍್ವಿಸ್, ಫ್ಲೋಟಿಂಗ್ ರೂಫ್) ತಾಂತ್ರಿಕ ದೋಷವನ್ನು ಪರಿಶೀಲಿಸಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಪ್ರಜ್ಞೆ ಕಳೆದುಕೊಂಡಿದ್ದ ಇಬ್ಬರು ಕಾರ್ಮಿಕರನ್ನು ತಕ್ಷಣವೇ ಪ್ರಥಮ ಚಿಕಿತ್ಸೆಗೆ ಕೊಂಡೊಯ್ಯಲಾಯಿತಾದರೂ, ಇಬ್ಬರೂ ಕಾರ್ಮಿಕರು ಮೃತಪಟ್ಟಿದ್ದಾರೆ. ಅವರ ರಕ್ಷಣೆಗೆ ತೆರಳಿದ ಮತ್ತೊಬ್ಬ ಕಾರ್ಮಿಕ, ವಿನಾಯಕ ಮ್ಯಾಗೇರಿ ಆರೋಗ್ಯ ಸಮಸ್ಯೆಗೆ ಒಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. MRPLನ ಚೀಫ್ ಜನರಲ್ ಮ್ಯಾನೇಜರ್ (CB&CC) ಡಾ. ರುಡಾಲ್ಫ್ VJ ನೊರೊನ್ಹಾ ಅವರು ಈ ಘಟನೆಯ ಕುರಿತು ವಿವರವಾದ ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಎಲ್ಲಾ ಸಂಬಂಧಿತ ಕಾನೂನು ಸಂಸ್ಥೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಅವರು ದೃಢಪಡಿಸಿದ್ದಾರೆ.






Ads on article

Advertise in articles 1

advertising articles 2

Advertise under the article