
RCBಯಿಂದ ಕನ್ನಡಿಗ ಮಯಾಂಕ್ ಸೇರಿ ಸ್ಟಾರ್ ಆಟಗಾರರು ಔಟ್
2025ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಮೊದಲ ಬಾರಿಗೆ ಟ್ರೋಫಿ ಗೆದ್ದಿರುವುದು ಎಲ್ಲರಿಗೂ ಗೊತ್ತಿರೋ ವಿಷಯ. ಆದರೆ ಇದೀಗ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದ್ದು, ಮುಂದಿನ ಆವೃತ್ತಿಯಿಂದ ಕ್ನನಡಿಗ ಮಯಾಂಕ್ ಅಗರ್‌ವಾಲ್ ಸೇರಿ ನಾಲ್ವರು ಆಟಗಾರರನ್ನು ಕೈಬಿಡಲು ಪ್ರಾಂಚೈಸಿ ನಿರ್ಧರಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ದಾರ್ ಸಲಾಂ ಹಾಗೂ ಲುಂಗಿ ಎನ್ಗಿಡಿ ಅವರನ್ನಯ ಕೈಬಿಡುವ ಸಾಧ್ಯತೆಯಿದೆ.
ಲಿಯಾಮ್ ಲಿವಿಂಗ್‌ಸ್ಟೋನ್: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇಂಗ್ಲೆ0ಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 8.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದರೂ, ಅವರು ಈ ಬಾರಿ ಆರ್‌ಸಿಬಿ ಪರ ಹೇಳಿಕೊಳ್ಳುವಷ್ಟು ಪ್ರದರ್ಶನ ತೋರಲಿಲ್ಲ. 10 ಪಂದ್ಯಗಳಲ್ಲಿ 16.00ರ ಸಾಮಾನ್ಯ ಸರಾಸರಿಯೊಂದಿಗೆ ಕೇವಲ 112 ರನ್‌ಗಳನ್ನು ಗಳಿಸಿದರು ಮತ್ತು ಕೇವಲ ಎರಡು ವಿಕೆಟ್‌ಗಳನ್ನಷ್ಟೇ ಪಡೆದು ನಿರಾಸೆ ಮೂಡಿಸಿದ್ದಾರೆ.
ರಸಿಕ್ ದಾರ್ ಸಲಾಂ: ಐಪಿಎಲ್ ಮೆಗಾ ಹರಾಜಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವೇಗಿ ರಸಿಕ್ ಸಲಾಂ ಅವರನ್ನು ಆರ್‌ಸಿಬಿ 6 ಕೋಟಿ ರೂಪಾಯಿಗೆ ಖರೀದಿಸಿತ್ತು. ಆದರೆ, ಅವರು ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಕೇವಲ 2 ಪಂದ್ಯಗಳನ್ನು ಆಡಿದರು. ಜೋಶ್ ಹ್ಯಾಜಲ್‌ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮತ್ತು ಇತರ ವೇಗಿಗಳ ಉಪಸ್ಥಿತಿಯಲ್ಲಿ, ಇವರು ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಆದ್ದರಿಂದ ಮುಂದಿನ ಬಾರಿಯಿಂದ ಇವರನ್ನು ಕೈಬಿಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕನ್ನಡಿದ ಮಯಾಂಕ್ ಅಗರ್ವಾಲ್: ಐಪಿಎಲ್ 2025ರಲ್ಲಿ ಆರ್‌ಸಿಬಿ ದೇವದತ್ ಪಡಿಕ್ಕಲ್ ಗಾಯದಿಂದ ಬಳಲುತ್ತಿದ್ದ ಕಾರಣ ಅವರ ಬದಲಿಯಾಗಿ ಮಾಯಾಂಕ್ ಅಗರ್ವಾಲ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಪಡಿಕ್ಕಲ್ ಪಂದ್ಯಾವಳಿಯಿAದ ಹೊರಗೆ ಉಳಿಯುವ ಮುಂಚೆ ಉತ್ತಮ ಫಾರ್ಮ್ನಲ್ಲಿದ್ದರು. ಒಟ್ಟು 10 ಪಂದ್ಯಗಳಲ್ಲಿ ಎರಡು ಅರ್ಧಶತಕಗಳೊಂದಿಗೆ 247 ರನ್‌ಗಳನ್ನು ಕಲೆಹಾಕಿದ್ದಾರೆ. ದೇವದತ್ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ಮಯಾಂಕ್ ಅಗರ್ವಾಲ್ ಅವರು ಐಪಿಎಲ್ 2025ರಲ್ಲಿ ಆರ್‌ಸಿಬಿ ಪರ ಕೇವಲ 4 ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಸರಾಸರಿ 31.66 ಮತ್ತು ಸ್ಟ್ರೈಕ್ ರೇಟ್ 148.43 ರೊಂದಿಗೆ 94 ರನ್ನು ಕಲೆಹಾಕಿದ್ದಾರೆ. ಆದರೂ, ಮುಂದಿನ ಸೀಸನ್‌ನಿಂದ ಪಡಿಕ್ಕಲ್ ಮರಳುವ ನಿರೀಕ್ಷೆಯಿರುವುದರಿಂದ 2026ರ ಮಿನಿ ಹರಾಜಿಗೆ ಮುಂಚಿತವಾಗಿ ಆರ್‌ಸಿಬಿ ಮಯಾಂಕ್ ಅಗರ್ವಾಲ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎನ್ನುವ ಶಾಕಿಂಗ್ ವಿಚಾರದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಲು0ಗಿ ಎನ್ಗಿಡಿ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ ಅವರನ್ನು ಆರ್‌ಸಿಬಿ 1 ಕೋಟಿ ರೂಪಾಯಿಗೆ ಖರೀದಿಸಿತ್ತು. ಜೋಶ್ ಹ್ಯಾಜಲ್‌ವುಡ್ ಗಾಯಗೊಂಡು ಹೊರಗುಳಿದ ಕಾರಣ ಅವರನ್ನು ಕೊಂಡುಕೊಳ್ಳಲಾಯಿತು. ಆರ್‌ಸಿಬಿ ಪರ ಕೇವಲ ಎರಡು ಪಂದ್ಯಗಳನ್ನಾಡಿದ ಎನ್ಗಿಡಿ 4 ವಿಕೆಟ್‌ಗಳನ್ನು ಪಡೆದರು. ಮತ್ತೆ ಹ್ಯಾಜಲ್‌ವುಡ್ ಮರಳುವ ಕಾರಣ ಐಪಿಎಲ್ 2026ರ ಮಿನಿ ಹರಾಜಿಗೂ ಮುಂಚಿತವಾಗಿ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇವರು ಹಲವು ಪ್ರಾಂಚೈಸಿಗಳ ಪರವಾಗಿ ಆಡಿದ್ದು, ಇದುವರೆಗೆ 16 ಐಪಿಎಲ್ ಪಂದ್ಯಗಳಲ್ಲಿ 29 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.