Udupi: ಜು.24ರಂದು ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕ ವಾವು ಬಲಿ

Udupi: ಜು.24ರಂದು ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕ ವಾವು ಬಲಿ


ಕೇರಳದಲ್ಲಿ ಪೂರ್ವಜರ ಆತ್ಮಮೋಕ್ಷಕ್ಕಾಗಿ ಅಚರಿಸುವ ಕರ್ಕಿಡಕ ವಾವು ಬಲಿ(ಬಲಿ ತರ್ಪಣಂ)ನ್ನು ಮೊದಲ ಬಾರಿಗೆ ಕೇರಳ ಸಮಾಜಂ ಉಡುಪಿ ಸಂಘಟನೆ ಮಲ್ಪೆ ಕಡಲ ತೀರದಲ್ಲಿ ಜುಲೈ 24 ರಂದು ಅಯೋಜನೆ  ಮಾಡಿದೆ. ಮಾಲಯಾಳಂ ಕ್ಯಾಲೆಂಡರ್ ಪ್ರಕಾರ ಜುಲೈ ಮತ್ತು ಅಗಸ್ಟ್ ತಿಂಗಳ ಮಧ್ಯದಲ್ಲಿ ಬರುವ ತಿಂಗಳನ್ನು ಕರ್ಕಿಡಕ ಮಾಸ ಎಂದು ಕರೆಯುತ್ತಾರೆ. ಈ ಸಂಧರ್ಭದಲ್ಲಿ ಮೃತಪಟ್ಟ ಪೂರ್ವಜ್ಜರ ಅತ್ಮ ಶಾಂತಿ ,ಸದ್ಗತಿಗಾಗಿ ಬಲಿ ತರ್ಪಣಂ ಮಾಡುವುದು ಕೇರಳದಲ್ಲಿ ಸಂಪ್ರದಾಯ. ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ  ಆಲುವಾ ಶಿವ ದೇವಾಲಯದ ಬಳಿಯ ಪೆರಿಯಾರನಂತಹ ನದಿ ದಂಡೆಗಳು ಮತ್ತು ವರ್ಕಳ ಪಾಪನಾಶಮ್‌ನಂತಹ ಕಡಲತೀರಗಳಲ್ಲಿ ಕರ್ಕಿಡಕ ವಾವು ಬಲಿ ಯನ್ನು ಬೃಹತ್ ಸಂಖ್ಯೆಯಲ್ಲಿ ಜನರು ಅಚರಿಸುತ್ತಾರೆ.


ಬಲಿ ತರ್ಪಣಂ ಆಚರಣೆಯನ್ನು ಸಾಮಾನ್ಯವಾಗಿ ಅಮಾವಾಸ್ಯೆಯ ದಿನದಂದು ಮಾಡಲಾಗುತ್ತದೆ, ವಿಶೇಷವಾಗಿ ಕರ್ಕಾಟಕ ಅಮಾವಾಸ್ಯೆ ಅಥವಾ ಕರ್ಕಿಡಕ ವಾವು ದಿನದಂದು. ಈ ದಿನದಂದು, ಭಕ್ತರು ನದಿಗಳು, ಸಮುದ್ರಗಳು ಅಥವಾ ಇತರ ಜಲಮೂಲಗಳ ಬಳಿ ಸೇರಿ ತಮ್ಮ ಪೂರ್ವಜರಿಗೆ ಎಳ್ಳು, ಅಕ್ಕಿ ಮತ್ತು ಇತರ ವಸ್ತುಗಳನ್ನು ಅರ್ಪಿಸುತ್ತಾರೆ. ಬಲಿ ತರ್ಪಣಂ ಅನ್ನು ಕುಟುಂಬದ ಯೋಗಕ್ಷೇಮಕ್ಕಾಗಿ ಮತ್ತು ಪೂರ್ವಜರ ಅನುಗ್ರಹವನ್ನು ಪಡೆಯಲು ಮಾಡಲಾಗುತ್ತದೆ ಎಂದು ನಂಬಲಾಗಿದೆ. ಈ ಆಚರಣೆಯಲ್ಲಿ, ಭಕ್ತರು ತಮ್ಮ ಪೂರ್ವಜರ ಆತ್ಮಗಳು ಶಾಂತಿ ಮತ್ತು ಮೋಕ್ಷವನ್ನು ಪಡೆಯಲಿ ಎಂದು ಪ್ರಾರ್ಥಿಸುತ್ತಾರೆ. ಸಾಮಾನ್ಯವಾಗಿ ಕಾಗೆಗಳಿಗೆ ಎಳ್ಳು ಮತ್ತು ಅನ್ನವನ್ನು ನೀಡಲಾಗುತ್ತದೆ, ಏಕೆಂದರೆ ಹಿಂದೂ ನಂಬಿಕೆಯ ಪ್ರಕಾರ ಕಾಗೆಗಳು ಮೃತರ ಆತ್ಮಗಳ ಪ್ರತಿನಿಧಿಗಳೆಂದು ಪರಿಗಣಿಸಲಾಗುತ್ತದೆ. 




ಜುಲೈ 24 ರ ಅಮಾವಾಸ್ಯೆ ದಿನ ಮಲ್ಪೆ ಕಡಲ ಕಿನಾರೆ ಯಲ್ಲಿ ನಡೆಯುವ ಕರ್ಕಿಡಕ ವಾವು ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸುವಂತೆ ಸಂಘಟಕರು ವಿನಂತಿ ಕೇಳಿಕೊಂಡಿದ್ದಾರೆ.  ಕಾರ್ಯಕ್ರಮವು ಅಂದು ಮುಂಜಾನೆ 5.30 ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅರಂಭಗೊಳ್ಳಲಿದೆ. ಶಾಸ್ತ್ರೋಸ್ತ್ರವಾಗಿ ವಿಧಿವಿಧಾನಗಳು ಮತ್ತು ಅದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಸಂಘಟಕರೇ ವ್ಯವಸ್ಥೆ ಮಾಡಿಕೊಡಲಿದ್ದಾರೆ.ಬಲಿ ತರ್ಪಣಂ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಯಿಸಿಕೊಳ್ಳಲು ಮತ್ತು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಬಹುದು. 9845 246448,  8904 383 739. ಒಟ್ಟಿನಲ್ಲಿ ಉದ್ಯೋಗಕ್ಕಾಗಿ  ಹಾಗೂ ಇನ್ನಿತರ ಕಾರ್ಯಕ್ಕಾಗಿ ಕೇರಳ ಬಿಟ್ಟು ಉಡುಪಿಯಲ್ಲಿ ನೆಲೆಯೂರಿರುವ ಕೇರಳ ಸಮಾಜದವರಿಗೆ ಇಲ್ಲಿಯೇ ಈ ಪುಣ್ಯ ಕಾರ್ಯ ವನ್ನು ಮಾಡಲು ಉಡುಪಿ ಕೇರಳ ಸಮಾಜಂ ಸಂಘಟನೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. 





Ads on article

Advertise in articles 1

advertising articles 2

Advertise under the article