
Udupi: ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಸನ್ಮಾನ
17/07/2025 04:48 AM
ವೈದ್ಯರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಹಿರಿಯ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ ಅವರನ್ನು ಸನ್ಮಾನಿಸಲಾಯಿತು.
ಕ್ಲಬ್ಬಿನ ವೈದ್ಯ ಸದಸ್ಯರಾದ ಡಾ. ಬಿ.ಜಿ.ಕೆ. ಆಚಾರ್ಯ, ಡಾ. ಎಚ್. ಭಾಸ್ಕರ್ ಶೆಟ್ಟಿ, ಡಾ. ಕೆ.ಕೆ. ಕಲ್ಕುರ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಲಯನ್ಸ್ ಅಧ್ಯಕ್ಷ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ರಮಾನಂದ ಎಲ್. ನಾಯಕ್, ಜತೆ ಕಾರ್ಯದರ್ಶಿ ಪ್ರಕಾಶ್ ಭಟ್, ವಲಯಾಧ್ಯಕ್ಷ ಲೂಯಿಸ್ ಲೋಬೊ, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೇಣುಕಾ ದಾಮೋದರ್ ಶೆಟ್ಟಿ, ಕಾರ್ಯದರ್ಶಿ ರಾಧಿಕಾ ಶೆಣೈ, ಕೋಶಾಧಿಕಾರಿ ಸುಜಯಾ ಶೆಟ್ಟಿ, ಲಿಯೊ ಕ್ಲಬ್ ಅಧ್ಯಕ್ಷೆ ಅವನಿ ಕಿಣಿ ಉಪಸ್ಥಿತರಿದ್ದರು.