-->
 ಭೂಕಬಳಿಕೆ ಪ್ರಕರಣ: ಬಿಜೆಪಿ ಮುಖಂಡ ಅಶ್ವಥ್ ನಾರಾಯಣ್‌ಗೆ 1 ವರ್ಷ ಜೈಲು

ಭೂಕಬಳಿಕೆ ಪ್ರಕರಣ: ಬಿಜೆಪಿ ಮುಖಂಡ ಅಶ್ವಥ್ ನಾರಾಯಣ್‌ಗೆ 1 ವರ್ಷ ಜೈಲು


ಸಿಲಿಕಾನ್ ಸಿಟಿಯಲ್ಲಿ ಭೂಕಬಳಿಕೆ ಪ್ರಕರಣದಲ್ಲಿ ಬಿಜೆಪಿ ಮಾಜಿ ಎಂಎಲ್‌ಸಿ ಅಶ್ವಥ್ ನಾರಾಯಣ್‌ಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿ ಅಕ್ರಮ ಲೇಔಟ್ ಮಾಡಿದ್ದ ಆರೋಪ ಮಾಜಿ ಎಂಎಲ್‌ಸಿ ಮೇಲಿತ್ತು. ಇದೀಗ ಕೋರ್ಟ್ 1 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಕೃಷಿ ಜಮೀನನ್ನು ಭೂ ಪರಿವರ್ತನೆ ಮಾಡದೆ ಖಾಲಿ ನಿವೇಶನಗಳಾಗಿ ವಿಂಗಡಿಸಿ ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಈ ಸಂಬAಧ ಮೈಸೂರಿನ ಡಾ. ಕಾವ್ಯಶ್ರೀ ದೂರು ನೀಡಿದ್ದರು. ಅದರನ್ವಯ ತೀರ್ಪು ಹೊರಬಿದ್ದಿದೆ. ಕೆಂಗೇರಿ ಹೋಬಳಿ ವ್ಯಾಪ್ತಿಯ ರಾಮಸಂದ್ರ ಗ್ರಾಮದ ಸರ್ವೆ ನಂಬರ್ 100/2ರಲ್ಲಿನ ರೈತರ 4 ಎಕರೆ 30 ಗುಂಟೆ ಕೃಷಿ ಜಮೀನನ್ನು ಕ್ರಯಕ್ಕೆ ಪಡೆದಿದ್ದರು. ಭೂ ಪರಿವರ್ತನೆ ಮಾಡದೆ ಸೈಟ್ ಮಾಡಿ ಮಾರಾಟ ಆರೋಪ ಇದೆ. ಕಾವ್ಯಶ್ರಿ ಅವರಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. 


Ads on article

Advertise in articles 1

advertising articles 2

Advertise under the article