ಕಾಂಗ್ರೆಸ್ ವತಿಯಿಂದ ಮನರೇಗಾ ಬಚಾವ್ ಸಂಗ್ರಾಮ ಜನಾಂದೋಲನ ಸಭೆ
Friday, January 30, 2026
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮನರೇಗಾ) ರದ್ದುಗೊಳಿಸಿದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಜನಾಂದೋಲನ ಮತ್ತು ಪ್ರತಿಭಟನಾ ಜಾಥಾವು ಕಾಪು ಪೇಟೆಯಲ್ಲಿ ನಡೆಯಿತು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಕಾಪು ಪೇಟೆಯಲ್ಲಿ ಜಾಥಾ ಸಾಗಿ ಬಂತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯ ಹೆಸರು ಮತ್ತು ಮೂಲ ಸ್ವರೂಪವನ್ನೇ ಬದಲಾಯಿಸಿ, ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಸಿದು ಕೊಂಡಿರುವುದನ್ನು ಖಂಡಿಸಲಾಯಿತು. ಅಲ್ಲದೇ ಹಿಂದಿನ ಉದ್ಯೋಗ ಖಾತರಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸುಧೀರ್ ಕುಮಾರ್ ಮುರೋಲಿ, ವೈ ಸುಕುಮಾರ್, ಎಂ.ಎ ಗಫೂರ್, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಶೆಟ್ಟಿ, ಪ್ರಶಾಂತ್ ಜತನ್ನ, ಶೇಖರ್ ಹೆಜಮಾಡಿ, ಶಾಂತಲತಾ ಶೆಟ್ಟಿ, ಶರ್ಫುದ್ದೀನ್ ಶೇಖ್, ನಿಯಾಜ್ ಪಡುಬಿದ್ರಿ, ಜೈಭಾ ಸೆಲ್ವಾನ್, ಅಮೀರ್ ಕಾಪು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
.jpeg)



.jpeg)
.jpeg)
.jpeg)

.jpeg)
.jpeg)

.jpeg)
