-->
 ಗರಡಿಮಜಲಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ...!?

ಗರಡಿಮಜಲಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ...!?


ಉಡುಪಿಯ ಗರಡಿಮಜಲು ಸಮೀಪ ನಿಲ್ಲಿಸಿದ್ದ ಖಾಸಗಿ ಬಸ್ಸಿನ ಸೀಟ್‌ಗಳನ್ನು ಹರಿದು, ಉಗುರುಗಳಿಂದ ತರಚಿದ ರೀತಿಯಲ್ಲಿ ಹಾನಿಗೊಳಿಸಲಾಗಿದೆ. ಈ ಭಾಗದ ಜನರು ಇದು ಚಿರತೆ ಕಾಟ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ರಾತ್ರಿ ಖಾಸಗಿ ಬಸ್ಸನ್ನು ಗರಡಿ ಮಜಲು ಸಮೀಪದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿತ್ತು. ಬೆಳಗ್ಗೆ ಬಂದು ನೋಡಿದಾಗ ಸೀಟುಗಳನ್ನು ಹರಿದು ಹಾಕಲಾಗಿತ್ತು. ಅಲ್ಲದೇ ಬಾನೆಟ್ ಮೇಲಿದ್ದ ಕುಶನ್ ಅನ್ನು ಹರಿದು ಹಾಕಲಾಗಿದೆ. ಚಾಲಕನ ಸೀಟಿಗೂ ಹಾನಿ ಮಾಡಲಾಗಿದೆ. ಕೆಲವರು ಇದು ಕಿಡಿಗೇಡಿಗಳ ಕೃತ್ಯ ಎನ್ನುತ್ತಿದ್ದರೆ ಇನ್ನು ಕೆಲವರು ಈ ಭಾಗದಲ್ಲಿ ಚಿರತೆ ಹಾವಳಿ ಇದೆ. ಹೀಗಾಗಿ ಚಿರತೆಯೇ ಬಸ್ಸಿನೊಳಗೆ ನುಗ್ಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳಿಂದ ಮಲ್ಪೆ, ಕೆಮ್ಮಣ್ಣು, ಹೂಡೆ, ಗರಡಿಮಜಲು ಪ್ರದೇಶದಲ್ಲಿ ಚಿರತೆಯೊಂದು ಓಡಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ವತಿಯಿಂದ ಬೋನ್ ಕೂಡಾ ಇರಿಸಲಾಗಿತ್ತು. ಇದೀಗ ಬಸ್ಸಿನೊಳಗೆ ನುಗ್ಗಿ ಚಿರತೆಯೇ ಹಾನಿಗೊಳಿಸಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದೆ. 







Ads on article

Advertise in articles 1

advertising articles 2

Advertise under the article