-->
ಮಂಗಳೂರಿನ ಗಾಳಿ ಬೆಂಗಳೂರಿಗಿಂತಲೂ ಕಲುಷಿತ: ಮುನ್ನೆಚ್ಚರಿಕೆ ಪಾಲಿಸಲು ಆರೋಗ್ಯ ಇಲಾಖೆ ಸೂಚನೆ

ಮಂಗಳೂರಿನ ಗಾಳಿ ಬೆಂಗಳೂರಿಗಿಂತಲೂ ಕಲುಷಿತ: ಮುನ್ನೆಚ್ಚರಿಕೆ ಪಾಲಿಸಲು ಆರೋಗ್ಯ ಇಲಾಖೆ ಸೂಚನೆ


ಕರ್ನಾಟಕದಲ್ಲಿ ಇಂದು ವಾಯುಗುಣಮಟ್ಟವು ಸಾಧಾರಣ ಮಟ್ಟದಲ್ಲಿದ್ದು, ಮಂಗಳೂರು ಹಾಗೂ ಉಡುಪಿ ಭಾಗದಲ್ಲಿ ವಾಯುಗುಣಮಟ್ಟವು ಕಳಪೆ ಹಂತದಲ್ಲಿ ಮುಂದುವರಿದಿದೆ.


ಮಂಗಳೂರು ನಗರದಲ್ಲಿ ವಾಯು ಗುಣಮಟ್ಟ ಬೆಂಗಳೂರಿಗಿಂತಲೂ ಕಳಪೆಯಾಗಿದೆ ಎನ್ನುವುದು ಬಹಿರಂಗವಾಗಿದೆ. ಮಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 172ರ ಗಡಿ ದಾಟಿದ್ದು,ವಿಶೇಷವಾಗಿ ಬೆಳಿಗ್ಗೆ 6 ರಿಂದ 8 ಗಂಟೆಯ ಅವಧಿಯಲ್ಲಿ ಮಾಲಿನ್ಯದ ಮಟ್ಟ ಹೆಚ್ಚಿರುತ್ತಿದೆ. 

ಉಡುಪಿಯಲ್ಲೂ AQI ಮಟ್ಟ 154 ರಷ್ಟಿದ್ದು, ಇದು ಕೂಡ ಕಳಪೆ ವಿಭಾಗಕ್ಕೆ ಸೇರುತ್ತದೆ. ಗಾಳಿಯಲ್ಲಿರುವ PM2.5 ಕಣಗಳ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಸುರಕ್ಷಿತ ಮಟ್ಟಕ್ಕಿಂತ ಸುಮಾರು 4 ಪಟ್ಟು ಹೆಚ್ಚಾಗಿದೆ. 

ಬೆಂಗಳೂರು –163, ಮಂಗಳೂರು-172, ಮೈಸೂರು –162, ಬೆಳಗಾವಿ-118,  ಕಲಬುರ್ಗಿ-151,  ಶಿವಮೊಗ್ಗ – 160, ಬಳ್ಳಾರಿ – 200, ಹುಬ್ಬಳ್ಳಿ- 134, ಉಡುಪಿ –167, ವಿಜಯಪುರ –150 ವಾಯು ಗುಣಮಟ್ಟ ದಾಖಲಾಗಿದೆ. 

ವಾಯುಗುಣಮಟ್ಟ ಕಳಪೆಯಾಗಿರುವ ಕಾರಣದಿಂದಾ ಶ್ವಾಸಕೋಶದ ಸಮಸ್ಯೆ ಇರುವವರು, ಮಕ್ಕಳು ಮತ್ತು ಹಿರಿಯ ನಾಗರಿಕರು ಬೆಳಿಗ್ಗೆ ಅಥವಾ ಸಂಜೆ ಹೊತ್ತು ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡುವುದು ಹಾಗೂ ಜನದಟ್ಟಣೆಯ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಸೂಕ್ತವೆಂದು ತಜ್ಞರು ಸೂಚಿಸಿದ್ದಾರೆ.  


Ads on article

Advertise in articles 1

advertising articles 2

Advertise under the article