ಕಾಪು ದಿವಾಕರ್ ಶೆಟ್ಟಿ ಮನೆಯಲ್ಲಿ ಕಳ್ಳತನ ಪ್ರಕರಣ; ವಿವಿಧ ಆಯಾಮಗಳಲ್ಲಿ ತನಿಖೆ ಚುರುಕು
Friday, January 30, 2026
ಉಡುಪಿಯ ಕಾಪು ಠಾಣಾ ವ್ಯಾಪ್ತಿಯ ಉಳಿಯಾರಗೋಳಿಯಲ್ಲಿ ಸಹಕಾರಿ ಧುರೀಣ ಕಾಪು ದಿವಾಕರ್ ಶೆಟ್ಟಿ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಗುರುವಾರ ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಸಿಸಿಟಿವಿ ಪುಡಿಗಟ್ಟಿ ಕೃತ್ಯ ಎಸಗಿದ್ದಾರೆ. ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಪಾಟಿನಲ್ಲಿದ್ದ ಸುಮಾರು 30ಗ್ರಾಂ ಚಿನ್ನಾಭರಣ, ಸುಮಾರು 9 ಲಕ್ಷ ರೂ ನಗದು, ಬೆಳ್ಳಿಯ ತಂಬಿಗೆಗಳು, 3 ಲಕ್ಷ ರೂ. ಮೌಲ್ಯದ 3 ವಾಚ್ ಗಳು, ಸುಮಾರು 300 ಗ್ರಾಂ ತೂಕದ ಬೆಳ್ಳಿಯ ಹರಿವಾಣಗಳು ಸಹಿತ 19.05 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ದೋಚಿದ್ದಾರೆ. ಘಟನಾಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೇಟಿ ನೀಡಿ ಮಾಹಿತಿ ಕಲೆಹಾಕಿವೆ.

