ಶಬರಿಮಲೆ ಚಿನ್ನ ಹಗರಣ ಪ್ರಕರಣ; ನಟ ಜಯರಾಮ್ ವಿಚಾರಣೆ
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನದ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡವು ನಟ ಜಯರಾಮ್ ಅವರನ್ನು ವಿಚಾರಣೆನಡೆಸಿದೆ. ಪ್ರಮುಖ ಆರೋಪಿ ಬೆಂಗಳೂರು ಮೂಲದ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಜೊತೆಗಿನ ಸಂಬOಧಕ್ಕೆ ಸಂಬOಧಿಸಿದOತೆ ಜಯರಾಮ್ ಅವರ ಹೇಳಿಕೆಯನ್ನು ಪಡೆದುಕೊಂಡಿದೆ.
ಎಸ್‌ಐಟಿ ಸದಸ್ಯರು ಜಯರಾಮ್ ಅವರನ್ನು ಚೆನ್ನೈನಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ ಹೇಳಿಕೆಗಳನ್ನು ಪಡೆದುಕೊಂಡರು. ಪ್ರಕರಣದಲ್ಲಿ ಅವರನ್ನು ಸಾಕ್ಷಿಯನ್ನಾಗಿ ಮಾಡಿದ್ದಾರೆ. ಶಬರಿಮಲೆ ದೇವಸ್ಥಾನದ ಚಿನ್ನದ ಲೇಪಿತ ಬಾಗಿಲಿನ ಭಾಗಗಳನ್ನು ಉನ್ನಿಕೃಷ್ಣನ್ ಪೊಟ್ಟಿ ಅವರು ಚೆನ್ನೈನಲ್ಲಿರುವ ನಟನ ಮನೆಗೆ ಕೊಂಡೊಯ್ಯುತ್ತಿರುವ ವೀಡಿಯೊಗಳು ಮತ್ತು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ಜಯರಾಂ ಅಯ್ಯಪ್ಪ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತಿರುವ ಚಿನ್ನದ ಲೇಪಿತ ವಸ್ತುಗಳ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಅದೃಷ್ಟ ಎಂದು ಹೇಳಿಕೊಳ್ಳುವ ವೀಡಿಯೊಗಳು ಈ ಹಿಂದೆ ಹೊರಬಂದಿದ್ದವು. ಪೊಟ್ಟಿಯೊಂದಿಗೆ ತಾನು ನಿಜವಾದ ಶಬರಿಮಲೆ ಯಾತ್ರಿಕನಾಗಿ ಮಾತ್ರ ಸಂಬOಧ ಹೊಂದಿದ್ದೇನೆ ಮತ್ತು ಪೊಟ್ಟಿಯ ಯಾವುದೇ ಸಂಶಯಾಸ್ಪದ ಚಟುವಟಿಕೆಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ನಟ ಒಪ್ಪಿಕೊಂಡಿದ್ದರು. ಏತನ್ಮಧ್ಯೆ, ಆರೋಪಪಟ್ಟಿಗಳನ್ನು ಸಲ್ಲಿಸುವಲ್ಲಿ ವಿಳಂಬವಾದ ಕಾರಣ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಆಡಳಿತ ಅಧಿಕಾರಿಗಳಾದ ಮುರಾರಿ ಬಾಬು ಮತ್ತು ಎಸ್. ಶ್ರೀಕುಮಾರ್ ಅವರಿಗೆ ಈಗಾಗಲೇ ಜಾಮೀನು ದೊರೆತಿರುವುದರಿಂದ ಎಸ್‌ಐಟಿ ಮೇಲೆ ಒತ್ತಡ ಬರುತ್ತಿದೆ. ಶ್ರೀಕುಮಾರ್ ಅವರ ಜಾಮೀನು ಆದೇಶದಲ್ಲಿ ನ್ಯಾಯಾಲಯವು ತನಿಖಾ ತಂಡವು ಅವರ ವಿರುದ್ಧ ಹೆಚ್ಚಿನ ಆರೋಪ ಹೊರಿಸುವ ಪುರಾವೆಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದೆ.