-->
 ಸಿಎನ್‌ಜಿ ಸರಬರಾಜಿನಲ್ಲಿನ ವ್ಯತ್ಯಯವನ್ನು ಕೂಡಲೇ ಸರಿಪಡಿಸಿ; ಅಧಿಕಾರಿಗಳಿಗೆ ಡಿಸಿ ಸೂಚನೆ

ಸಿಎನ್‌ಜಿ ಸರಬರಾಜಿನಲ್ಲಿನ ವ್ಯತ್ಯಯವನ್ನು ಕೂಡಲೇ ಸರಿಪಡಿಸಿ; ಅಧಿಕಾರಿಗಳಿಗೆ ಡಿಸಿ ಸೂಚನೆ


ಉಡುಪಿ ಜಿಲ್ಲೆಯಲ್ಲಿ ಸಿ.ಎನ್.ಜಿ ಗ್ಯಾಸ್ ಸರಬರಾಜಿನಲ್ಲಿ ಉಂಟಾಗುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯನ್ನು ನಡೆಸಲಾಯಿತು. 


ಜಿಲ್ಲೆಯಲ್ಲಿ ಸಿ.ಎನ್. ಜಿ ಗ್ಯಾಸ್ ಬಳಸಿ ವಾಹನ ಚಾಲನೆ ಮಾಡುತ್ತಿರುವ ಆಟೋ ಚಾಲಕರು ಸೇರಿದಂತೆ ಮತ್ತಿತರರ ವಾಹನಗಳಿಗೆ ಗ್ಯಾಸ್ ತುಂಬಿಸಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಉಂಟಾಗಿದ್ದು, ಈ ಸಂಬOಧ ಗೈಲ್ ಗ್ಯಾಸ್ ಕಂಪನಿ ಹಾಗೂ ಅದಾನಿ ಕಂಪನಿಯವರೊOದಿಗೆ ಸಮನ್ವಯ ಸಾಧಿಸಿಕೊಂಡು ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಸುಗಮವಾಗಿ ಗ್ಯಾಸ್ ಲಭ್ಯವಾಗುವಂತೆ ಹಾಗೂ ಸಿ.ಎನ್.ಜಿ ಬಳಸುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗ್ಯಾಸ್ ವಿತರಣೆಗೆ ಅಗತ್ಯವಿರುವ ಇಲ್ಲಾ ರೀತಿಯ ಕಾರ್ಯ ಚಟುವಟಿಕೆ ಕೈಗೊಂಡು ಬೇಡಿಕೆಗೆ ಅನುಗುಣವಾಗಿ ಪೂರೈಸುವಂತೆ ಗ್ಯಾಸ್ ಕಂಪೆನಿಯ ಪ್ರತಿನಿಧಿಗಳಿಗೆ ಸೂಚನೆಯನ್ನು ನೀಡಲಾಯಿತು. ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article