ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ ನಿಷಿದ್ಧ..!
Saturday, January 31, 2026
ರಾಜ್ಯಾದ್ಯಂತ ಸಾರ್ವಜನಿಕ ಬಸ್‌ಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಲಾಗಿದೆ.
ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಾಗಲಿ ಅಥವಾ ಬಸ್ ನಿಲ್ದಾಣದ ಆವರಣದಲ್ಲಾಗಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಜಾಹೀರಾತುಗಳಿಗೆ ಅವಕಾಶವಿರುವುದಿಲ್ಲ. ಇದರಲ್ಲಿ ದೃಶ್ಯ ಮಾಧ್ಯಮದ ಪ್ರಚಾರ, ಪೋಸ್ಟರ್‌ಗಳು, ಸ್ಟಿಕ್ಕರ್‌ಗಳು ಅಥವಾ ತಂಬಾಕು ಉತ್ಪನ್ನಗಳಿಗೆ ಸಂಬOಧಿಸಿದ ಯಾವುದೇ ಬ್ರ‍್ಯಾಂಡಿOಗ್ ಒಳಗೊಂಡಿರುತ್ತದೆ. ಈಗಾಗಲೇ ಅಳವಡಿಸಲಾಗಿರುವ ಅಂತಹ ಎಲ್ಲಾ ಜಾಹೀರಾತುಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.
