-->
 ಸಿದ್ದಾಪುರ ಏತ ನೀರಾವರಿ ಯೋಜನೆ: ಹೊಸಂಗಡಿ ಬಾಗೀಮನೆ ಪರಿಸರದಲ್ಲಿ ಸರ್ವೇ ಕಾರ್ಯ

ಸಿದ್ದಾಪುರ ಏತ ನೀರಾವರಿ ಯೋಜನೆ: ಹೊಸಂಗಡಿ ಬಾಗೀಮನೆ ಪರಿಸರದಲ್ಲಿ ಸರ್ವೇ ಕಾರ್ಯ


ಹೊಸಂಗಡಿ ಗ್ರಾಮದ ಬಾಗೀಮನೆ ಪರಿಸರದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆಯ ಇಂಜಿನಿಯರುಗಳು ಸರ್ವೇ ಕಾರ್ಯವನ್ನು ನಡೆಸಿದರು. ಯೋಜನೆಗೆ ಸಂಬOಧಿಸಿದ ತಾಂತ್ರಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಸ್ಥಳ ಪರಿಶೀಲನೆ ಕೈಗೊಳ್ಳಲಾಯಿತು.

ಸರ್ವೇ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಶೆಟ್ಟಿ ಕಾರೂರು ಹಾಗೂ ಆನಂದ ಕಾರೂರು ಭೇಟಿ ನೀಡಿ ಇಂಜಿನಿಯರ್‌ಗಳಿಗೆ ಅಗತ್ಯ ಸಹಕಾರ ನೀಡಿದರು. ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಯಾದಲ್ಲಿ ಹೊಸಂಗಡಿ ಗ್ರಾಮದ ಬಾಗೀಮನೆ ಪರಿಸರದಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದ್ದು, ಮುಂದಿನ ಹಂತಗಳಲ್ಲಿ ಯೋಜನೆಯ ಪ್ರಗತಿಗೆ ಅನುಗುಣವಾಗಿ ಇನ್ನಷ್ಟು ಕಾರ್ಯಗಳು ನಡೆಯಲಿದೆ.




Ads on article

Advertise in articles 1

advertising articles 2

Advertise under the article